ಮುದ್ದೇಬಿಹಾಳ (ವಿಜಯಪುರ): ಮುದ್ದೇಬಿಹಾಳ ಪಟ್ಟಣದ ಹುಡ್ಕೋ ಪಕ್ಕದಲ್ಲಿರುವ ಅಂಚೆ ನೌಕರರೊಬ್ಬರ ಮನೆಯಲ್ಲಿ ಕಳ್ಳತನ ನಡೆದಿದೆ.
ಮುದ್ದೇಬಿಹಾಳದಲ್ಲಿ ಅಂಚೆ ನೌಕರನ ಮನೆಗೆ ಕನ್ನ - ಮುದ್ದೇಬಿಹಾಳ ಪಟ್ಟಣದ ಹುಡ್ಕೋ
ಮುದ್ದೇಬಿಹಾಳ ಪಟ್ಟಣದ ಹುಡ್ಕೋ ಪಕ್ಕದಲ್ಲಿರುವ ಅಂಚೆ ನೌಕರರೊಬ್ಬರ ಮನೆಯ ಬೀರುವಿನಲ್ಲಿದ್ದ 70 ಸಾವಿರ ನಗದು ಹಾಗೂ ಒಂದೂವರೆ ತೊಲೆ ಬಂಗಾರ ಕಳ್ಳತನವಾಗಿದೆ.
ಮುದ್ದೇಬಿಹಾಳದಲ್ಲಿ ಅಂಚೆ ನೌಕರನ ಮನೆಗಳ್ಳತನ
ಅಂಚೆ ನೌಕರ ಮಹಾಬಳೇಶ ಗಡೇದ ತಮ್ಮ ಪುತ್ರನ ನೀಟ್ ತರಬೇತಿ ಸಲುವಾಗಿ ಬೆಂಗಳೂರಿಗೆ ತೆರಳಿದ್ದರು. ಈ ವೇಳೆ ಮನೆಗೆ ನುಗ್ಗಿದ ಕಳ್ಳರು, ಬೀರುವಿನಲ್ಲಿದ್ದ 70 ಸಾವಿರ ನಗದು ಹಾಗೂ ಒಂದೂವರೆ ತೊಲೆ ಬಂಗಾರ ಕಳ್ಳತನ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಸಿಪಿಐ ಆನಂದ ವಾಘಮೋಡೆ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.