ವಿಜಯಪುರ: ಜಿಲ್ಲಾ ಅಬಕಾರಿ ಪೊಲೀಸರು ಕಾರ್ಯಾಚರಣೆ ನಡೆಸಿ ತೋಟದಲ್ಲಿ ಬೆಳೆದಿದ್ದ 10 ಲಕ್ಷ ರೂ. ಮೌಲ್ಯದ 100 ಕೆ.ಜಿ ಗಾಂಜಾ ಜೊತೆಗೆ ಮಾಲೀಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಾದೇವ ಖಸ್ಕಿ ಬಂಧಿತ ಆರೋಪಿ. ಅಬಕಾರಿ ಇಲಾಖೆ ಉಪಅಧೀಕ್ಷಕ ಶಾಂತೇಶ್ ಕಾಮತ್ ನೇತೃತ್ವದಲ್ಲಿ ಅಬಕಾರಿ ಸಿಬ್ಬಂದಿ ಜಿಲ್ಲೆಯ ಇಂಡಿ ತಾಲೂಕಿನ ಮಿರಗಿ ಗ್ರಾಮದಲ್ಲಿ ಗಾಂಜಾ ಜಪ್ತಿ ಮಾಡಿಕೊಂಡಿದ್ದಾರೆ.