ವಿಜಯಪುರ: ಆಕ್ರಮವಾಗಿ ಕಳ್ಳಭಟ್ಟಿ ತಯಾರಿಸುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಕಳ್ಳಭಟ್ಟಿ ಬಳಕೆ ಸಾಮಗ್ರಿ ಹಾಗೂ ತಯಾರಿಕೆಗೆ ಬಳಸಲಾಗುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಹರಣಶಿಕಾರಿ ಕಾಲೋನಿಯಲ್ಲಿ ಆಕ್ರಮವಾಗಿ ಕಳ್ಳಭಟ್ಟಿ ತಯಾರಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. 2000ಕ್ಕೂ ಅಧಿಕ ಲೀಟರ್ ಕಳ್ಳಭಟ್ಟಿ ನಾಶ ಮಾಡಿದ್ದಾರೆ. ಕಲೋನಿಯ ಬಡಾವಣೆಯ ಮನೆ ಮೆನೆಗಳಿಗೂ ಪೊಲೀಸರು ತೆರಳಿ ಕೊಡಗಳಲ್ಲಿ ಸಂಗ್ರಹಿಸಿದ್ದ ಕಳ್ಳಭಟ್ಟಿಯನ್ನು ನಾಶ ಮಾಡಿದ್ದಾರೆ. ಬೀಗ ಹಾಕಲಾಗಿದ್ದ ಮನೆಗಳ ಬೀಗ ಒಡೆದು ಕಳ್ಳಭಟ್ಟಿ ತಯಾರಿಕೆ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.