ಮುದ್ದೇಬಿಹಾಳ : ತಾಲೂಕಿನ ನಾಲತವಾಡದಲ್ಲಿ ಮಾಸ್ಕ್ ಹಾಕದೆ ಬಂದ ಬೈಕ್ ಸವಾರನಿಗೆ ತೊಟ್ಟಿದ್ದ ಲುಂಗಿಯನ್ನೇ ಬಿಚ್ಚಿಸಿ ಮಾಸ್ಕ್ ರೀತಿ ಮುಖಕ್ಕೆ ಕಟ್ಟಿಸಿದ ಪೊಲೀಸರು ವಿನೂತನವಾಗಿ ಜಾಗೃತಿ ಮೂಡಿಸಿದ್ದಾರೆ.
ತಾಲೂಕಿನ ನಾಲತವಾಡದ ನಾರಾಯಣಪುರ ರಸ್ತೆಯಲ್ಲಿ ಬರುವ ಪೆಟ್ರೋಲ್ ಪಂಪ್ ಹತ್ತಿರ ಗಸ್ತಿನಲ್ಲಿದ್ದ ಪೊಲೀಸ್ ಸಿಬ್ಬಂದಿ ಮಾಸ್ಕ್ ಹಾಕದೆ ಬಂದ ಸವಾರನನ್ನು ತಡೆದು ನಿಲ್ಲಿಸಿ ಅವರು ತೊಟ್ಟಿದ್ದ ಲುಂಗಿಯನ್ನೇ ಮಾಸ್ಕ್ ರೀತಿಯಲ್ಲಿ ಕಟ್ಟಿಸಿದ್ದಾರೆ.