ವಿಜಯಪುರ:ಪೊಲೀಸ್ ಇಲಾಖೆಯಿದೆ, ಪೊಲೀಸರು ತನಿಖೆ ಮಾಡುತ್ತಾರೆ. ಕಾಯೋಣ, ನಿನ್ನೆ ತಾನೇ ಪೊಲೀಸ್ ತನಿಖೆ ಆರಂಭವಾಗಿದೆ. ಸ್ವಲ್ಪ ದಿನಗಳ ನಂತರ ಸತ್ಯಾಂಶ ಹೊರಗೆ ಬಂದೇ ಬರುತ್ತದೆ. ಜಸ್ಟ್ ವೇಟ್ ಮಾಡೋಣ ಎಂದು ರಮೇಶ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ಸತೀಶ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದರು.
ಸಿಡಿ ಪ್ರಕರಣ: ಪೊಲೀಸ್ ತನಿಖೆಯಾಗ್ತಿದೆ, ವೇಟ್ ಮಾಡೋಣ... ಸತೀಶ ಜಾರಕಿಹೊಳಿ - ramesh jarakiholi cd case
ಇಂತಹ ಘಟನೆ ನಡೆಯ ಬಾರದೆಂದು ಎಲ್ಲರ ಅಭಿಪ್ರಾಯವಿದೆ. ಇನ್ನಷ್ಟು ನೋಡೋಣ, ಪೊಲೀಸರು ತನಿಖೆ ಮಾಡಲಿ, ತಕ್ಷಣ ಹೇಳಲಿಕ್ಕಾಗಲ್ಲಾ. ಸ್ವಲ್ಪ ವೇಟ್ ಮಾಡೋಣ. ಸಿಬಿಐ ತನಿಖೆಗೆ ನಾವು ಆಗ್ರಹ ಮಾಡುವುದಿಲ್ಲ. ತನಿಖೆ ಮಾಡುತ್ತಿರುವ ಪೊಲೀಸರೇ ಮಾಡಿದರೆ ಮಾಡಲಿ ಎಂದು ಸತೀಶ ತಿಳಿಸಿದರು.
ಸತೀಶ
ವಿಜಯಪುರ ತಾಲೂಕಿನ ಜುಮನಾಳ ಗ್ರಾಮದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸತೀಶ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದರು.
ಯಾರನ್ನೂ ದ್ವೇಷ ಮಾಡುವ ಅವಶ್ಯಕತೆ ಇಲ್ಲ. ಇಡೀ ಘಟನೆ ಕುರಿತು ಸಿಬಿಐ ತನಿಖೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಒತ್ತಾಯ ಮಾಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಸತೀಶ, ಇಂತಹ ಘಟನೆ ನಡೆಯ ಬಾರದೆಂದು ಎಲ್ಲರ ಅಭಿಪ್ರಾಯವಿದೆ. ಇನ್ನಷ್ಟು ನೋಡೋಣ, ಪೊಲೀಸರು ತನಿಖೆ ಮಾಡಲಿ, ತಕ್ಷಣ ಹೇಳಲಿಕ್ಕಾಗಲ್ಲಾ. ಸ್ವಲ್ಪ ವೇಟ್ ಮಾಡೋಣ. ಸಿಬಿಐ ತನಿಖೆಗೆ ನಾವು ಆಗ್ರಹ ಮಾಡುವುದಿಲ್ಲ. ತನಿಖೆ ಮಾಡುತ್ತಿರುವ ಪೊಲೀಸರೇ ಮಾಡಿದರೆ ಮಾಡಲಿ ಎಂದರು.