ವಿಜಯಪುರ:ಲಾಕ್ಡೌನ್ ನಡುವೆಯೂ ನಗರದಲ್ಲಿ ಜನರು ನಕಲಿ ವಾಹನ ಪಾಸ್ ಬಳಕೆ ಮಾಡಿಕೊಂಡು ಓಡಾತ್ತಿರುವ ಪ್ರಕರಣ ಬೆಳಕಿಗೆ ಬರುತ್ತಿದೆ. ಹೀಗಾಗಿ ಡಿಎಸ್‌ಪಿ ಲಕ್ಷ್ಮೀ ನಾರಾಯಣ ನೇತೃತ್ವದ ಪೊಲೀಸ್ ತಂಡ ವಿಶೇಷ ತಪಾಸಣೆಯ ಮೂಲಕ ವಾಹನ ಸವಾರರಿಗೆ ಬಿಸಿ ಮುಟ್ಟಿಸಲು ಮುಂದಾಗಿದೆ.
ನಕಲಿ ವಾಹನ ಪಾಸ್ ಬಳಕೆದಾರರಿಗೆ ಪೊಲೀಸ್ ಇಲಾಖೆ ಮೂಗುದಾರ
ವಿಜಯಪುರ ಜಿಲ್ಲೆಯಲ್ಲಿ ನಕಲಿ ವಾಹನ ಪಾಸ್ ಬಳಕೆ ಮಾಡಿಕೊಂಡು ಓಡಾಡುತ್ತಿದ್ದವರಿಗೆ ಪೊಲೀಸ್ ಇಲಾಖೆ ಮೂಗುದಾರ ಹಾಕಿದೆ.
ನಕಲಿ ವಾಹನ ಪಾಸ್ ಬಳಕೆದಾರರಿಗೆ ಮೂಗುದಾರ ಹಾಕುತ್ತಿದೆ ಪೊಲೀಸ್ ಇಲಾಖೆ
ಕಳೆದೆರಡು ದಿನಗಳ ಹಿಂದೆ ನಕಲಿ ಪಾಸ್ ತಯಾರಿಕೆ ಪ್ರಕರಣ ಸುದ್ದಿಯಾಗುತ್ತಿದ್ದಂತೆ ವಾಹನ ಸವಾರರ ಮೇಲೆ ಇಲಾಖೆ ಹದ್ದಿನ ಕಣ್ಣು ಇಟ್ಟಿದೆ. ಗಾಂಧಿ ವೃತ್ತ, ಕೇಂದ್ರ ಬಸ್ ನಿಲ್ದಾಣ, ಗೋಲ್ ಗುಂಬಾಜ್ ರಸ್ತೆ ಸೇರಿದಂತೆ ನಗರ ಹಲವು ಭಾಗಗಳಲ್ಲಿ ವಾಹನ ಸವಾರರ ತಪಾಸಣೆ ನಡೆಯುತ್ತಿದೆ.
ಇತ್ತ ಆಸ್ಪತ್ರೆ ಹೆಸರಿನಲ್ಲಿ ಹೆಚ್ಚು ಜನರು ನಗರದಲ್ಲಿ ಓಡಾಟ ನಡೆಸುತ್ತಿರುವುದು ಕಂಡು ಬರುತ್ತಿರುವ ಕಾರಣ ಪ್ರಮುಖ ರಸ್ತೆಗಳಲ್ಲಿ ಓಡಾಟ ನಡೆಸುವವರ ಮೇಲೆ ಪೊಲೀಸ್ ಇಲಾಖೆ ನಿಗಾ ಇರಿಸಿದೆ. ತರಕಾರಿ ತರುವ ನೆಪದಲ್ಲಿ ರಸ್ತೆಗೆ ಇಳಿಯುತ್ತಿರುವವರ ಬೈಕ್‌ಗಳನ್ನು ಸೀಜ್ ಮಾಡಲಾಗುತ್ತಿದೆ.