ಕರ್ನಾಟಕ

karnataka

ETV Bharat / state

ವಿಜಯಪುರ: 37 ವಿದ್ಯಾರ್ಥಿಗಳಿಗೆ ಊಟ, ವಸತಿ ಕಲ್ಪಿಸಿ ನೆರವಾದ ಪೊಲೀಸರು - Competitive test preparation

ದೇಶದಲ್ಲಿ ಲಾಕ್​​​ಡೌನ್ ಜಾರಿಯಲ್ಲಿರುವುರಿಂದ ಸ್ಪರ್ಧಾತ್ಮಕ ಪರೀಕ್ಷಾ ತಯಾರಿಗೆ ನಗರಕ್ಕೆ ಆಗಮಿಸಿದ್ದ 37 ವಿದ್ಯಾರ್ಥಿಗಳಿಗೆ ಲಾಕ್​​ಡೌನ್ ಮುಗಿಯುವವರೆಗೂ ಊಟ, ವಸತಿ ಕಲ್ಪಿಸಿ ಆಸರೆಯಾಗುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.

Police assisted 37 students with meals and accommodations
37 ವಿದ್ಯಾರ್ಥಿಗಳಿಗೆ ಊಟ, ವಸತಿ ಕಲ್ಪಿಸಿ ನೆರವಾದ ಪೊಲೀಸರು

By

Published : Apr 3, 2020, 4:46 PM IST

ವಿಜಯಪುರ:ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ನಗರಕ್ಕೆ ಆಗಮಿಸಿದ್ದ 37 ವಿದ್ಯಾರ್ಥಿಗಳಿಗೆ ಲಾಕ್​​ಡೌನ್ ಮುಗಿಯುವವರೆಗೂ ಊಟ, ವಸತಿ ಕಲ್ಪಿಸಿ ಆಸರೆಯಾಗುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.

37 ವಿದ್ಯಾರ್ಥಿಗಳಿಗೆ ಊಟ, ವಸತಿ ಕಲ್ಪಿಸಿ ನೆರವಾದ ಪೊಲೀಸರು

ಲಾಕ್​ಡೌನ್ ಹಿನ್ನೆಲೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗೆ ಜಿಲ್ಲೆಗೆ ಬಂದಿದ್ದ ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ತೆರಳಲು ವಾಹನ ಸೌಕರ್ಯವಿಲ್ಲದೆ ಪರದಾಟ ನಡೆಸುತ್ತಿದ್ದರು. ನಗರದ ಎಲ್ಲಾ ಹೋಟೆಲ್​​​ಗಳು ಬಂದ್​ ಆಗಿರುವ ಕಾರಣದಿಂದ ವಿದ್ಯಾರ್ಥಿಗಳಿಗೆ ಊಟ ಸಿಗದೆ ಪರಿತಪಿಸುವಂತಾಗಿತ್ತು. ದೇಶದಲ್ಲಿ ಲಾಕ್​​ಡೌನ್ ಜಾರಿಯಲ್ಲಿರುವುರಿಂದ ವಿದ್ಯಾರ್ಥಿಗಳು ಸರಿಯಾದ ಊಟ, ವಸತಿ ಇಲ್ಲದೆ ಸಂಕಷ್ಟ ಅನುಭವಿವಂತಾಗಿತು. ವಿಷಯ ತಿಳಿಯುತ್ತಿದ್ದಂತೆ ಗಾಂಧಿ ಚೌಕ್ ಪೊಲೀಸ್ ಠಾಣೆ ಸಿಪಿಐ ರವೀಂದ್ರ ನಾಯ್ಕೋಡಿ ವಿದ್ಯಾರ್ಥಿಗಳ ನೆರವಿಗೆ ಬಂದಿದ್ದಾರೆ.

ವಿದ್ಯಾರ್ಥಿಗಳಿಗೆ ಪ್ರತಿದಿನ ಊಟದ ವ್ಯವಸ್ಥೆ ಮಾಡಿಸಿ ವಿದ್ಯಾರ್ಥಿನಿಯರು ಇರುವ ಪಿಜಿ ಮಾಲೀಕರಿಗೆ ವಸತಿ ಸೌಕರ್ಯ ಒದಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಯಾವುದೇ ತೊಂದ್ರೆಯಾದರೂ ಪೊಲೀಸ್ ಇಲಾಖೆ ಗಮನಕ್ಕೆ ತರುವಂತೆ ಸಿಪಿಐ ರವೀಂದ್ರ ವಿದ್ಯಾರ್ಥಿಗಳಿಗೆ ಹೇಳಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷಾ ತಯಾರಿಗೆ ನಗರಕ್ಕೆ ಆಗಮಿಸಿದ್ದ 37ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಲಾಕ್​​ಡೌನ್ ಮುಗಿಯುವವರೆಗೂ ಪೊಲೀಸರು ಆಸರೆಯಾಗುವುದಾಗಿ ಭರವಸೆ ನೀಡಿದ್ದಾರೆ.

ABOUT THE AUTHOR

...view details