ವಿಜಯಪುರ:ಎಲ್ಲರೂ ಜೀವನದಲ್ಲಿ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು. ಸೋಲು - ಗೆಲುವುವನ್ನು ಸಮಾಂತರವಾಗಿ ಸ್ವೀಕರಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು.
ವಾಲಿಬಾಲ್ ಆಡಿ ಕ್ರೀಡಾಪಟುಗಳನ್ನು ಹುರಿದುಂಬಿಸಿದ ಡಿಸಿ, ಎಸ್ಪಿ, ಸಿಇಒ
ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜಯಪುರ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ, ಎಸ್ಪಿ ಅನುಪಮ್ ಅಗರವಾಲ್, ಜಿ.ಪಂ ಸಿಇಒ ಗೋವಿಂದ ರೆಡ್ಡಿ ವಾಲಿಬಾಲ್ ಆಡುವ ಮೂಲಕ ಕ್ರೀಡಾಪಟುಗಳನ್ನು ಹುರಿದುಂಬಿಸಿದರು.
ನಗರದ ಪೊಲೀಸ್ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ - 2021 ಉದ್ಘಾಟಿಸಿ ಮಾತನಾಡಿದರು. ರಾಜ್ಯ ತಂಡಗಳು ಪ್ರತಿನಿಧಿಸುತ್ತಿದ್ದರೆ, ಜನರು ತಮ್ಮ ತಂಡವನ್ನು ಬೆಂಬಲಿಸುತ್ತಾರೆ. ಅದೇ ತಂಡಗಳು ಸೇರಿ ಆಡಿದರೆ, ನಮ್ಮ ದೇಶದ ತಂಡ ಎಂದು ಬೆಂಬಲಿಸುತ್ತಾರೆ. ಕ್ರೀಡಾಪಟುಗಳು ಮೊದಲು ನಮ್ಮ ದೇಶ, ನಂತರ ರಾಜ್ಯ, ಜಿಲ್ಲೆಗಳಾಗಿ ಕ್ರೀಡೆಯನ್ನು ಆಹ್ಲಾದಿಸಬೇಕು ಎಂದರು.
ವಾಲಿಬಾಲ್ ಆಡಿದ ಅಧಿಕಾರಿಗಳು: ಜಿಲ್ಲಾಧಿಕಾರಿ ಪಿ.ಸುನೀಲಕುಮಾರ, ಎಸ್ಪಿ ಅನುಪಮ್ ಅಗರವಾಲ್, ಜಿ.ಪಂ ಸಿಇಒ ಗೋವಿಂದ ರೆಡ್ಡಿ ವಾಲಿಬಾಲ್ ಆಡುವ ಮೂಲಕ ಕ್ರೀಡಾಪಟುಗಳನ್ನು ಹುರಿದುಂಬಿಸಿದರು. ಡಿಸಿ ಮೂರು ಸರ್ವಿಸ್ ಮಾಡಿ, ಗಮನ ಸೆಳೆದರು. ಅಧಿಕಾರಿಗಳ ಕ್ರೀಡಾ ಉತ್ಸಾಹ ನೋಡಿ ನೆರೆದಿದ್ದ ಕ್ರೀಡಾಪಟುಗಳು, ಶಿಳ್ಳೆ, ಚಪ್ಪಾಳೆ ಹೊಡೆದು ಹುರಿದುಂಬಿಸಿದರು.