ವಿಜಯಪುರ: ಮಕ್ಕಳ ಸಾಹಿತಿ ಶರಣಪ್ಪ ಕಂಚ್ಯಾಣಿ (92) ಇಂದು ವಿಧಿವಶರಾದರು. ಕಳೆದ ಐವತ್ತು ವರ್ಷಗಳಿಂದ ಸಾಹಿತ್ಯ ಸೇವೆ ತೊಡಗಿದ್ದ ಇವರು ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಮಕ್ಕಳ ಸಾಹಿತಿ ಎಂದೇ ಪರಿಚಿತರಾಗಿದ್ದ ಶರಣಪ್ಪ, ಕವನ, ಮಕ್ಕಳ ಕಥೆ, ಶಿಶು ಪ್ರಾಸ, ಖಂಡ ಕಾವ್ಯ, ಚರಿತ್ರೆ ಸೇರಿದಂತೆ ಇತರೆ ವಿಷಯಗಳಲ್ಲೂ ಸಾಹಿತ್ಯ ಕೃಷಿ ಮಾಡಿದ್ದರು.
ಮಕ್ಕಳ ಸಾಹಿತಿ ಕಂಚ್ಯಾಣಿ ಶರಣಪ್ಪ ನಿಧನ - ಸಾಹಿತಿ ಕಂಚ್ಯಾನಿ ದೇಹದಾನ
ಮಕ್ಕಳ ಸಾಹಿತಿಯೆಂದೇ ಪರಿಚಿತರಾಗಿದ್ದ ಸಾಹಿತಿ ಶರಣಪ್ಪ ಕಂಚ್ಯಾಣಿ ವಯೋಸಹಜ ಕಾಯಿಲೆಯಿಂದ ವಿಧಿವಶರಾಗಿದ್ದಾರೆ.
![ಮಕ್ಕಳ ಸಾಹಿತಿ ಕಂಚ್ಯಾಣಿ ಶರಣಪ್ಪ ನಿಧನ poet-sharanappa-kanchyani-fated](https://etvbharatimages.akamaized.net/etvbharat/prod-images/768-512-15006682-thumbnail-3x2-yy.jpg)
ಸಾಹಿತಿ ಕಂಚ್ಯಾಣಿ ಶರಣಪ್ಪ ವಿಧಿವಶ
ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿಗಳು ಸಂದಿವೆ. ಮೃತರ ಆಶಯದಂತೆ ಅವರ ಕುಟುಂಬಸ್ಥರು ನಗರದ ಬಿಎಲ್‌ಡಿಇ ಮೆಡಿಕಲ್ ಕಾಲೇಜಿಗೆ ದೇಹದಾನ ಮಾಡಿದ್ದಾರೆ.
ಇದನ್ನೂ ಓದಿ:ಬೈಕ್-ಲಾರಿ ಮಧ್ಯೆ ಡಿಕ್ಕಿ.. ತಂದೆ-ಮಗನ ಮೇಲೆ ಉರುಳಿ ಬಿದ್ದ ವಾಹನ