ವಿಜಯಪುರ: ಇನ್ನು ಎರಡು ದಿನದಲ್ಲಿ ನೂರಕ್ಕೆ ನೂರರಷ್ಟು ನೆರೆ ಪರಿಹಾರ ಕೊಟ್ಟೇ ಕೊಡ್ತಾರೆ. ಪ್ರಧಾನಿಗಳು ಯಾವುದೇ ರೀತಿ ಕರ್ನಾಟಕದ ಜನರ ಭಾವನೆಗಳಿಗೆ ಅವಮಾನ ಮಾಡೋದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ಕೇಂದ್ರ ಗೃಹ ಹಾಗೂ ಹಣಕಾಸು ಸಚಿವರು ಬಂದು ಸಂತ್ರಸ್ತರ ಪರಿಸ್ಥಿತಿ ಅವಲೋಕಿಸಿದ್ದಾರೆ. ಕೇಂದ್ರ ಗೃಹ ಮಂತ್ರಿಗಳು ವೈಮಾನಿಕ ಸಮೀಕ್ಷೆ ಮಾಡಿದ್ದಾರೆ. ಇಷ್ಟೆಲ್ಲಾ ಸಾಕ್ಷಾಧಾರಗಳು ಇರುವಾಗ ಅಂತಿಮ ಪರಿಹಾರ ಕೇಳುತ್ತಿದ್ದೇವೆ. ಕೇಂದ್ರ ಸರ್ಕಾರ ತಕ್ಷಣವೇ 5 ಸಾವಿರ ಕೋಟಿ ರೂ. ನೆರೆ ಪರಿಹಾರ ರಾಜ್ಯಕ್ಕೆ ಬಿಡುಗಡೆ ಮಾಡಬೇಕು. ಇಷ್ಟೆಲ್ಲಾ ಗೊಂದಲಗಳ ನಡುವೆ ಮುಖ್ಯಮಂತ್ರಿಗಳು ಬೆಳಗಾವಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಅವರಿಗೂ ಕಳಕಳಿ ಇದೆ. ಕೇಂದ್ರ ಸರ್ಕಾರ ಕೂಡ ಇದಕ್ಕೆ ಸ್ಪಂದನೆ ನೀಡಬೇಕು ಎಂದರು.