ಮುದ್ದೇಬಿಹಾಳ (ವಿಜಯಪುರ):ಕೆಲಸ ಅರಸಿ ಹೊರ ರಾಜ್ಯದಿಂದ ಮುದ್ದೇಬಿಹಾಳಕ್ಕೆ ಆಗಮಿಸಿದ್ದ ವಲಸೆ ಕಾರ್ಮಿಕರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಾಕ್ಡೌನ್ ಬಿಗಿಗೊಳಿಸಿರುವ ಹಿನ್ನೆಲೆ ಜಿಲ್ಲೆಯಿಂದ ಯಾರು ಹೊರಹೋಗಲಾಗದ ಪರಿಸ್ಥಿತಿ ಇದೆ.
ಈ ಹಿನ್ನೆಲೆ ಮಧ್ಯಪ್ರದೇಶ, ಉತ್ತರ ಪ್ರದೇಶದ ಕಾರ್ಮಿಕರು ತಮ್ಮ ರಾಜ್ಯಕ್ಕೆ ವಾಪಸ್ ಹೋಗಲಾಗದೆ ಪರಿತಪಿಸುತ್ತಿದ್ದಾರೆ. ಅಲ್ಲದೆ ನಮ್ಮನ್ನು ನಮ್ಮ ರಾಜ್ಯಕ್ಕೆ ಕಳುಹಿಸಿಕೊಡಿ ಅಂತ ಮುದ್ದೇಬಿಹಾಳ ಪುರಸಭೆಗೆ ಆಗಮಿಸಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ನಮ್ಮನ್ನೂ ಊರಿಗೆ ಕಳುಹಿಸಿಕೊಡಿ: ಪುರಸಭೆ ಬಳಿ ಅನ್ಯರಾಜ್ಯ ಕಾರ್ಮಿಕರ ಗೋಳಾಟ ಈ ವೇಳೆ ಪಟ್ಟಣದ ಪುರಸಭೆ ಆವರಣದಲ್ಲಿ ಈಟಿವಿ ಭಾರತ್ನೊಂದಿಗೆ ಮಾತನಾಡಿದ ಮಧ್ಯಪ್ರದೇಶದ ಕಾರ್ಮಿಕ ಸತ್ಯನಾರಾಯಣ, ಸೇವಾಸಿಂಧು ಆ್ಯಪ್ನಲ್ಲಿ ಹೆಸರು ನೋಂದಾಯಿಸಲು ತಿಳಿಸಿದ್ದರು. ಆದರೆ ಆ ಆ್ಯಪ್ ಆನ್ಲೈನ್ನಲ್ಲಿ ನೋಂದಾವಣೆ ಆಗುತ್ತಿಲ್ಲ. ಅದು ಬಂದ್ ಆಗಿ ಮೂರು ದಿನಗಳಾಗಿವೆ. ಜನಸೇವಾ ಆ್ಯಪ್ನಲ್ಲೂ ನೋಂದಣಿ ಆಗುತ್ತಿಲ್ಲ. ಊಟಕ್ಕೆಂದು ತಾಲೂಕಾಡಳಿತದಿಂದ ಎರಡು ಸಲ ದಿನಸಿ ಕೊಟ್ಟಿದ್ದಾರೆ. ಆದರೆ ನಾವು ನಮ್ಮ ಊರಿಗೆ ತೆರಳಬೇಕಿದೆ ಅಂತ ಸಮಸ್ಯೆ ಹಂಚಿಕೊಂಡಿದ್ದಾರೆ.
ಒಟ್ಟು 20ಕ್ಕೂ ಹೆಚ್ಚು ಕಾರ್ಮಿಕರು ಪುರಸಭೆಗೆ ಬಂದಿದ್ದು ಅವರೆಲ್ಲ ಹೆಸರು, ದೂರವಾಣಿ ಸಂಖ್ಯೆಯನ್ನು ಬರೆದುಕೊಟ್ಟು ಹೋಗಿದ್ದಾರೆ. ಆದರೆ ತಮ್ಮ ರಾಜ್ಯಕ್ಕೆ ಹೋಗುವ ಸ್ಪಷ್ಟ ಭರವಸೆ ಇನ್ನೂ ಅವರಿಗೆ ಸಿಕ್ಕಿಲ್ಲ. ಜಿಲ್ಲಾಡಳಿತ, ತಾಲೂಕಾಡಳಿತ ಇವರನ್ನು ಅವರ ರಾಜ್ಯಕ್ಕೆ ಕಳಿಸಿಕೊಡುವ ವ್ಯವಸ್ಥೆ ಮಾಡಬೇಕಿದೆ.