ಮುದ್ದೇಬಿಹಾಳ (ವಿಜಯಪುರ):ಪ್ರಾಣಿಗಳು ಕಾದಾಟ ನಡೆಸಿ ಪ್ರಾಣ ಬಿಡುವುದನ್ನು ನಾವು ಕಂಡಿದ್ದೇವೆ. ಆದರೆ ವಿಜಯಪುರದ ಮುದ್ದೇಬಿಹಾಳದಲ್ಲಿ ನಾಯಿ ಮರಿಗಳಿಗೆ ಹಂದಿ ಹಾಲು ಕುಡಿಸುವ ಮೂಲಕ ಮಾತೃಪ್ರೇಮ ಮೆರೆದಿದೆ.
ಮುದ್ದೇಬಿಹಾಳ ಪಟ್ಟಣದ ಮಹಾಂತೇಶ ನಗರದಲ್ಲಿ ಈ ದೃಶ್ಯ ಕಂಡುಬಂದಿದೆ. ಇಲ್ಲಿ ಹಂದಿಯೊಂದು ಮೂರು ನಾಯಿ ಮರಿಗಳಿಗೆ ಆಗಾಗ ತನ್ನ ಮೊಲೆ ಹಾಲು ಕುಡಿಸುತ್ತಿದೆ. ಮರಿಗಳಿಗೆ ಜನ್ಮ ನೀಡಿದ ನಾಯಿ ಎಲ್ಲೋ ಮರೆಯಾಗಿದೆ. ಹಾಗಾಗಿ ಅಲ್ಲೇ ಸುತ್ತಾಡುತ್ತಿದ್ದ ಹಂದಿಯೊಂದು ಈ ಮರಿಗಳಿಗೆ ಹಾಲುಣಿಸಿ ತಾಯಿ ಪ್ರೀತಿ ತೋರಿಸಿ ಬದುಕು ಕಲ್ಪಿಸಿಕೊಟ್ಟಿದೆ.
ಇದನ್ನೂ ಓದಿ:ಹಾವೇರಿ: ಕಣವಿಸಿದ್ದಗೇರಿ ಸರ್ಕಾರಿ ಶಾಲೆಗೆ ಹೊಸ ಸ್ಪರ್ಶ.. ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ