ಮುದ್ದೇಬಿಹಾಳ:ಬದಲಾವಣೆ ಮತ್ತು ಅಭಿವೃದ್ದಿ ದೃಷ್ಟಿಯಿಂದ ವಿದ್ಯಾವಂತರು ರಾಜಕೀಯದತ್ತ ಮುಖಮಾಡುತ್ತಿದ್ದಾರೆ.ತಾಲೂಕಿನ ಬಸರಕೋಡ ಗ್ರಾಮ ಪಂಚಾಯಿತಿ ಚುನಾವಣೆಗೆ ಪಿಎಚ್‌ಡಿ ಪದವೀಧರರೊಬ್ಬರು ಅಖಾಡಕ್ಕಿಳಿದಿದ್ದಾರೆ.
ಬಸರಕೋಡ ಗ್ರಾಮದ ಡಾ.ಅಶೋಕ ಬಸಪ್ಪ ಚಿತ್ತರಗಿ ಎಂಬುವರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ತಮ್ಮ ಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿಗೆ ಪಣ ತೋಡುವುದಾಗಿ ಹೇಳಿಕೊಂಡಿದ್ದಾರೆ.
ಗ್ರಾಮ ಪಂಚಾಯತಿ ಚುನಾವಣಾ ಕಣಕ್ಕಿಳಿದ ಪಿಎಚ್‌ಡಿ ಪದವೀಧರ ಪ್ರಚಾರ ಕಾರ್ಯಕ್ಕೆ ಆಟೋ ರಿಕ್ಷಾ ತಂದ ಅಭ್ಯರ್ಥಿ
ಆಟೋ ರಿಕ್ಷಾವನ್ನು ತಮ್ಮ ಗುರುತಿನ ಚಿಹ್ನೆಯಾಗಿಸಿಕೊಂಡಿರುವ ಅಶೋಕ್ ಅವರು ಪ್ರಚಾರಕ್ಕಾಗಿ ಆಟೋವನ್ನೇ ಬಳಸುತ್ತಿದ್ದಾರೆ. ಆಟೋ ಮೂಲಕ ನೇರವಾಗಿ ಮತದಾರರ ಮನೆಗೆ ಹೋಗುವ ಅಭ್ಯರ್ಥಿ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ.
ಪ್ರಾಧ್ಯಾಪಕರಾಗಿ 6 ತಿಂಗಳು ಸೇವೆ
ಮುದ್ದೇಬಿಹಾಳದ ಎಮ್ಜಿವಿಸಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾ ವಿಶ್ವವಿದ್ಯಾಲಯದಲ್ಲಿ ಪದವಿ ವ್ಯಾಸಂಗ ಮುಗಿಸಿರುವ ಡಾ.ಚಿತ್ತರಗಿ ಅವರು 2016ರಲ್ಲಿ ಎಂಎಸ್ಸಿ, ಪಿಎಚ್‌ಡಿ ವ್ಯಾಸಂಗವನ್ನು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಮುಗಿಸಿದ್ದಾರೆ.
ಅಲ್ಲದೆ, ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ (ಬಾಟನಿ) ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಆರು ತಿಂಗಳು ಕಾಲ ಸೇವೆ ಸಲ್ಲಿಸಿದ್ದಾರೆ. ಸದ್ಯ ರಾಜಕೀಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ಪ್ರಯತ್ನಿಸುತ್ತಿದ್ದಾರೆ.