ಕರ್ನಾಟಕ

karnataka

ETV Bharat / state

ದೇಶದಲ್ಲಿ ಪಿಎಫ್​ಐ ಶಾಶ್ವತವಾಗಿ ಬ್ಯಾನ್ ಮಾಡಬೇಕು: ಬಸನಗೌಡ ಪಾಟೀಲ್ ಯತ್ನಾಳ್ - ಈಟಿವಿ ಭಾರತ ಕನ್ನಡ

ಆರ್​ಎಸ್​ಎಸ್​ ದೇಶವಿರೋಧಿ ಚಟುವಟಿಕೆ ಮಾಡಿಲ್ಲ. ಬೇರೆ ಧರ್ಮದ ಮೇಲೆ ಪ್ರಹಾರ ಮಾಡಿಲ್ಲ. ಅದರ ಮೇಲಿದ್ದ ನಿಷೇಧವನ್ನು ಸುಪ್ರೀಂಕೋರ್ಟ್​ ವಾಪಸ್ ತೆಗೆದುಕೊಂಡಿದೆ ಎಂದು ಆರ್​ಎಸ್​ಎಸ್​ ಬ್ಯಾನ್ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

basangouda-patil-yatnal
ಬಸನಗೌಡ ಪಾಟೀಲ್ ಯತ್ನಾಳ್

By

Published : Sep 28, 2022, 4:04 PM IST

ವಿಜಯಪುರ:ಪಿಎಫ್​ಐ ಸೇರಿ ಇತರ 8 ಸಂಘಟನೆಗಳ ಬ್ಯಾನ್ ಮಾಡಿರುವದು ಸ್ವಾಗತಾರ್ಹ ಕ್ರಮವಾಗಿದೆ. ದೇಶ ವಿರೋಧಿ ಚಟುವಟಿಕೆ, ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವ ಪಿಎಫ್​ಐ ಅನ್ನು ಬ್ಯಾನ್ ಮಾಡಲು ಆಗ್ರಹ ಮೊದಲಿನಿಂದಲೂ ಇತ್ತು. ಇಂದು ನಮ್ಮ ಜನ ನೆಮ್ಮದಿಯಿಂದ ಬದುಕಲು ಐತಿಹಾಸಿಕ ನಿರ್ಣಯ ತೆಗೆದು ಕೊಂಡಿದ್ದಾರೆ. ಸಾಕ್ಷ್ಯಾಧಾರ ಸಹಿತವಾಗಿ ಕೇಂದ್ರ ಬ್ಯಾನ್ ಮಾಡಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ವಿಜಯಪುರದಲ್ಲಿ ಮಾತನಾಡಿದ ಅವರು, ಪ್ರಧಾನಿಗಳು, ಕೇಂದ್ರ ಗೃಹ ಸಚಿವರು ಪಿಎಫ್​ಐ ಸೇರಿ ಇತರ 8 ಸಂಘಟನೆಗಳ ಬ್ಯಾನ್ ಮಾಡಿದ್ದಾರೆ. ದೇಶಾದ್ಯಂತ ದಾಖಲೆ ರೀತಿಯಲ್ಲಿ ರೇಡ್ ಮಾಡಿದ್ದಾರೆ. ದೇಶ ಒಡೆಯಲು ಪಾಕಿಸ್ತಾನ, ಯುಎಇ ಜೊತೆಗೆ ಪಿಎಫ್​ಐ ಸಂಬಂಧ ಇತ್ತು ಅಲ್ಲಿಂದ ಸಾವಿರಾರು‌ ಕೋಟಿ ಹಣ ಬರುತ್ತಿತ್ತು ಎಂಬ ಪುರಾವೆಗಳು ಸಿಕ್ಕಿವೆ ಎಂದು ಗಂಭೀರ ಆರೋಪ ಮಾಡಿದರು.

ದೇಶದಲ್ಲಿ ಪಿಎಫ್​ಐ ಶಾಶ್ವತವಾಗಿ ಬ್ಯಾನ್ ಮಾಡಬೇಕು

ಇದೇ ವೇಳೆ, ಆರ್​ಎಸ್​ಎಸ್​ ಬ್ಯಾನ್ ಮಾಡಲು ಒತ್ತಾಯ ವಿಚಾರವಾಗಿ ಪ್ರತಿಕ್ರಿಯಿಸಿ, ಆರ್​ಎಸ್​ಎಸ್​ ದೇಶಭಕ್ತರ ಸಂಘಟನೆ. ದೇಶದ ಉನ್ನತ ಸ್ಥಾನದಲ್ಲಿರುವವರು ಆರ್​ಎಸ್​ಎಸ್​ ನಿಂದ ಬಂದವರು. ಆರ್​ಎಸ್​ಎಸ್​ ಹಿಂಸಾಕೃತ್ಯದಲ್ಲಿ ತೊಡಗಿಲ್ಲ, ಮದ್ದು ಗುಂಡು ಸಂಗ್ರಹಿಸಿಲ್ಲ. ದೇಶವಿರೋಧಿ ಚಟುವಟಿಕೆ ಮಾಡಿಲ್ಲ. ಬೇರೆ ಧರ್ಮದ ಮೇಲೆ ಪ್ರಹಾರ ಮಾಡಿಲ್ಲ. ಅದರ ಮೇಲಿದ್ದ ನಿಷೇಧವನ್ನು ಸುಪ್ರೀಂಕೋರ್ಟ್​ ವಾಪಸ್ ತೆಗೆದುಕೊಂಡಿದೆ ಎಂದರು.

ಪಿಎಫ್ಐ ಶಾಶ್ವತವಾಗಿ ಬ್ಯಾನ್ ಮಾಡಬೇಕಾ ಅನ್ನೋ ಪ್ರಶ್ನೆಗೆ ಯತ್ನಾಳ್ ಪ್ರತಿಕ್ರಿಯೆ ನೀಡಿ, ಐದು ವರ್ಷದಲ್ಲಿ ಪಿಎಫ್​ಐ ಬುಡದಿಂದ ಕಿತ್ತು ಹಾಕಬೇಕು. ಯಾವ ಹುತ್ತದಿಂದ ಯಾವ ಹಾವು ಬರುತ್ತೊ ಗೊತ್ತಿಲ್ಲ. ಅಧ್ಯಯನ ಮಾಡಿ ಸಂಪೂರ್ಣ ಸರ್ವನಾಶ ಮಾಡಬೇಕು ಎಂದರು.

ಇದನ್ನೂ ಓದಿ :ದೇಶವಿರೋಧಿ ಚಟುವಟಿಕೆ ನಡೆಸುವ ಎಲ್ಲ ಸಂಘಟನೆಗಳ ವಿರುದ್ಧ ಕ್ರಮ: ಸಚಿವ ಹೆಬ್ಬಾರ್

ABOUT THE AUTHOR

...view details