ಕರ್ನಾಟಕ

karnataka

ETV Bharat / state

ವಿಜಯಪುರ: ಸಿಡಿಲು ಬಡಿದು ವ್ಯಕ್ತಿ ಸಾವು - lightning strike in tikota

ತಿಕೋಟಾದಲ್ಲಿ ಭಾನುವಾರ ರಾತ್ರಿ ಭಾರಿ ಮಳೆಯಾಗಿದ್ದು, ಸಿಡಿಲು ಬಡಿದು ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾನೆ.

person-killed-in-lightning-strike-in-vijayapura
ಸಿಡಿಲು ಬಡಿದು ವ್ಯಕ್ತಿ ಸಾವು

By

Published : Aug 23, 2021, 8:20 AM IST

ವಿಜಯಪುರ:ಸಿಡಿಲು ಬಡಿದು ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ತಿಕೋಟಾ ತಾಲೂಕಿನ ಬರಟಗಿ ಗ್ರಾಮದಲ್ಲಿ ನಡೆದಿದೆ. ತಿಕೋಟಾದ ಕಳ್ಳಕವಟಗಿ ಗ್ರಾಮದ ಹನುಮಂತ ಲಕ್ಷ್ಮಣ ಡೊಂಬಾಳೆ (38) ಎಂಬಾತ ಮೃತಪಟ್ಟಿದ್ದಾನೆ.

ಹನುಮಂತ ಹಾಗೂ ಕುಟುಂಬದವರು ಕೆಲಸಕ್ಕೆಂದು ಬರಟಗಿ ಗ್ರಾಮಕ್ಕೆ ತೆರಳಿದ್ದರು. ಭಾನುವಾರ ರಾತ್ರಿ ಗುಡುಗುಸಹಿತ ಭಾರಿ ಮಳೆಯಾಗಿದ್ದು, ತೋಟದಲ್ಲಿದ್ದ ಆಕಳು ತರಲು ಹೋಗುವಾಗ ಸಿಡಿಲು ಬಡಿದು ವ್ಯಕ್ತಿಯು ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಈತನಿಗೆ ಐವರು ಹೆಣ್ಣುಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳು ಹಾಗೂ ತಂದೆ-ತಾಯಿ ಇದ್ದಾರೆ.

ಸಿಡಿಲು ಬಡಿದು ವ್ಯಕ್ತಿ ಸಾವು

ಬಡತನದಿಂದ ಕಳ್ಳಕವಟಗಿ ಬಿಟ್ಟು ಬರಟಗಿ ಗ್ರಾಮಕ್ಕೆ ದುಡಿಯಲು ಹನುಮಂತ ತಮ್ಮ ಕುಟುಂಬ ಸಮೇತ ಹೋಗಿದ್ದರು. ವಿಷಯ ತಿಳಿದು ಸ್ಥಳಕಾಗಮಿಸಿದ ತಿಕೋಟಾ ಕಂದಾಯ ನೀರಿಕ್ಷಕ ಎಂ.ಎಂ. ಇನಾಮದಾರ, ಬರಟಗಿ ಗ್ರಾಮ ಲೆಕ್ಕಾಧಿಕಾರಿ ಎಸ್.ಎಸ್.ಸೋಲಾಪುರ, ಎ.ಎಸ್.ಐ ಎನ್.ಎ.ಉಪ್ಪಾರ ಮಾಹಿತಿ ಪಡೆದಿದ್ದಾರೆ.

ಇದನ್ನೂ ಓದಿ:ಟೀ ಮಾರಾಟ ಮಾಡಿ ಬದುಕಿನ ಬಂಡಿ ಸಾಗಿಸುತ್ತಿರುವ ಕಲಬುರಗಿ ಮಾಜಿ ಮೇಯರ್

ABOUT THE AUTHOR

...view details