ವಿಜಯಪುರ:ಲಾಕ್‌ಡೌನ್ ಸಡಿಲಿಕೆ ಬಳಿಕ ಕೊರೊನಾ ವೈರಸ್ ತಡೆಯಲು ಸರ್ಕಾರ ವಿಧಿಸಿದ ನಿಯಮಗಳಿಗೆ ತಲೆಕೆಡಿಸಿಕೊಳ್ಳದ ಗುಮ್ಮಟನಗರಿಯ ಜನ ಎಲ್ಲೆಂದರಲ್ಲಿ ಬೇಕಾಬಿಟ್ಟಿ ಓಡಾಡುತ್ತಿದ್ದಾರೆ. ಎಲ್‌ಬಿಎಸ್ ಮಾರುಕಟ್ಟೆ, ಸ್ಟೇಷನ್ ರಸ್ತೆ, ಗಾಂಧಿ ವೃತ್ತ ಸೇರಿದಂತೆ ನಗರದ ಕೇಂದ್ರ ಪ್ರದೇಶಗಳು ಜನ ದಟ್ಟಣೆಯಿಂದ ಕೂಡಿವೆ.
ಸರ್ಕಾರದ ನಿಯಮಗಳಿಗೆ ಡೋಂಟ್ ಕೇರ್ ಅಂದ್ರು ಗುಮ್ಮಟನಗರಿ ಜನ... - ಮಾಸ್ಕ್ ಹಾಕಾದೆ ಬೇಕಾಬಿಟ್ಟಿ ಸುತ್ತಾಟ
ಮಹಾರಾಷ್ಟ್ರದಿಂದ ಬಂದಿರುವ ಕಾರ್ಮಿಕರಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಪರಿಸ್ಥಿತಿ ಹೀಗಿದ್ದರೂ ವಿಜಯಪುರದ ಜನ ಮಾತ್ರ ಆರೋಗ್ಯದ ಬಗ್ಗೆ ಕಾಳಜಿ ವಹಿಸದೆ ಬೇಕಾಬಿಟ್ಟಿ ಸುತ್ತಾಡುತ್ತಿದ್ದಾರೆ.
ಸರ್ಕಾರದ ನಿಯಮಗಳಿಗೆ ಡೋಂಟ್ ಕೇರ್ ಅಂದ್ರು ಗುಮ್ಮಟನಗರಿ ಜನ
ಕೊರೊನಾ ವೈರಸ್‌ನಿಂದ ಸಾರ್ವಜನಿಕರು ದೂರ ಉಳಿಯಲು ಸಾಮಾಜಿಕ ಅಂತರ ಪಾಲನೆ, ದ್ವಿಚಕ್ರ ವಾಹನದಲ್ಲಿ ಒಬ್ಬರ ಪ್ರಯಾಣ ಇಂತಹ ಮೊದಲಾದ ನಿಯಮಗಳು ಇಲ್ಲಿ ಜಾರಿಯಲ್ಲಿದ್ದರೂ, ಇಲ್ಲಿನ ಜನ ಮಾತ್ರ, ತಮಗೂ ಆದೇಶಗಳಿಗೂ ಸಂಬಂಧವಿಲ್ಲವೇನೋ ಎಂಬಂತೆ ರಾಜಾರೋಷವಾಗಿ ರಸ್ತೆಗಳಲ್ಲಿ ಸಂಚಾರ ನಡೆಸಿದ್ದಾರೆ.