ವಿಜಯಪುರ: ಕೊರೊನಾ ಭೀತಿಯಿಂದ ಬೀಗ ಹಾಕಿದ ಚಿತ್ರ ಮಂದಿರಗಳಿಗೆ ಸರ್ಕಾರ ಕಳೆದ ತಿಂಗಳು ಸಿನಿಮಾ ಪ್ರದರ್ಶನಕ್ಕೆ ಅನುಮತಿ ನೀಡಿದೆ. ಇತ್ತ ಏಕಮುಖ ಪರದೆಯ ಚಿತ್ರಮಂದಿರಗಳಿಗೆ ತೆರೆಗೆ ಕಡಿಮೆ ಮಾಡ್ಬೇಕು ಎಂದು ಮಾಲೀಕರು ಚಿತ್ರ ಮಂದಿರಗಳಿಗೆ ಬೀಗ ಜಡಿದಿದ್ರು. ಪ್ರಸ್ತುತ ನಷ್ಟದಲ್ಲಿರುವ ಚಿತ್ರ ಮಂದಿರಗಳು ಓಪನ್ ಆಗಿದ್ರು, ಸಿನಿಮಾ ಪ್ರೇಕ್ಷಕರಿಲ್ಲದೆ ಮತ್ತೇ ನಷ್ಟಕ್ಕೆ ಸಿಲುಕುವಂತಾಗಿದೆ.
ಕೊರೊನಾ ವೈರಸ್ ಸಿನಿಮಾ ಉದ್ಯಮವನ್ನೂ ನುಂಗಿತು. ವೈರಸ್ ದಾಳಿಗೆ ತತ್ತರಿದ ಥಿಯೇಟರ್ ಮಾಲೀಕರು ಮಾರ್ಚ್ 14 ರಿಂದ ಸಿನಿಮಾ ಮಂದಿರಗಳಿಗೆ ಬೀಗ ಹಾಕಿದ್ರು. ಇತ್ತ ಸರ್ಕಾರ ಏಕಮುಖ ಪರದೆ ಚಿತ್ರಮಂದಿರಗಳಿಗೆ ವಿಧಿಸುತ್ತಿರುವ ತೆರೆಗೆ ಹೊರೆಯಾಗುತ್ತಿದೆ ಎಂದು ಬಹುತೇಕ ಚಿತ್ರಮಂದಿರ ಮಾಲೀಕರು ಸಿನಿಮಾ ಪ್ರದರ್ಶನ ಮಾಡದೆ ಬಂದ್ ಮುಂದುವರಿಸಿದ್ರು. ಗುಮ್ಮಟನಗರಿ ವಿಜಯಪುರ ಜಿಲ್ಲೆಯಲ್ಲಿ 28 ಏಕಮುಖ ಪರದೆ ಮಂದಿರಗಳಿವೆ. ಮಾಲೀಕರು ತೆರಿಗೆ ವಿನಾಯಿತಿಗೆ ಸರ್ಕಾರ ಮುಂದಾಗುವಂತೆ ಬೇಡಿಕೆಯಿಟ್ಟಿದ್ದರು. ಬಳಿಕ ನ.20 ರಂದು ಜಿಲ್ಲೆಯ ಕೆಲವು ನಿಸಿಮಾ ಥಿಯೇಟರ್ಗಳು ಆರಂಭಗೊಂಡರು ಪ್ರೇಕ್ಷಕರಿಲ್ಲದೆ ಕಂಗಾಲಾಗಿದ್ದಾರೆ.
ನಿಯಮ ಪಾಲನೆ ಮಾಡಿದ್ರು ಸಿನಿಮಾ ನೋಡದ ಜನ:
ಕೊರೊನಾ ತಡೆಗೆ ಸರ್ಕಾರದ ನಿರ್ದೇಶನ ಪಾಲನೆಯೊಂದಿಗೆ ಥಿಯೇಟರ್ಗಳು ಕಳೆದ ಶುಕ್ರವಾರದಿಂದ ಆರಂಭಿಸಿಲಾಗಿದೆ. ಕೊರೊನಾ ಭಯಕ್ಕೆ ಹೆದರಿದ ಸಿನಿ ಪ್ರೀಯರು ಚಿತ್ರ ಮಂದಿರಗಳಲ್ಲಿ ಸಿನಿಮಾ ವೀಕ್ಷಕರು ಮುಂದಾಗದಿರೋದು, ಸಂಕಷ್ಟದಲ್ಲಿದ ಮಾಲೀಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಥಿಯೇಟರ್ ನಿರ್ವಹಣೆಗೂ ಸಾಲದ ಕಲೆಕ್ಷನ್: