ವಿಜಯಪುರ: ಕೊರೊನಾ ತಡೆಗೆ ಜನದಟ್ಟಣೆ ಕಡಿಮೆ ಮಾಡಲು ಅನವಶ್ಯಕವಾಗಿ ಹೊರಗೆ ಬರಬಾರದು ಎಂದು ಜಿಲ್ಲಾಡಳಿತ ಆದೇಶ ಮಾಡಿದ್ದರೂ ಜನರು ಮಾತ್ರ ಡೋಂಟ್‌ಕೇರ್ ಎನ್ನುತ್ತಿದ್ದಾರೆ.
ಜಿಲ್ಲಾಡಳಿತದ ಆದೇಶಕ್ಕೂ ಡೋಂಟ್ ಕೇರ್.. ಸಾಮಾಜಿಕ ಅಂತರ ಮರೆತ ಜನ - covid-19 precautions
ಪ್ರತಿದಿನ ಎಲ್‌ಬಿಎಸ್ ಮಾರುಕಟ್ಟೆ, ಸಿದ್ದೇಶ್ವರ ಮಂದಿರ ರಸ್ತೆಗಳು ಜನ ಜಂಗುಳಿಯಿಂದ ಕೂಡಿರುತ್ತದೆ..
ಸಾಮಾಜಿಕ ಅಂತರ ಮರೆತ ಜನ
ನಗರದ ಪ್ರಮುಖ ರಸ್ತೆಗಳಲ್ಲಿ ಜನ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಮರೆತು ವಹಿವಾಟಿನಲ್ಲಿ ತೊಡಗಿದ್ದಾರೆ. ಪ್ರತಿದಿನ ಎಲ್‌ಬಿಎಸ್ ಮಾರುಕಟ್ಟೆ, ಸಿದ್ದೇಶ್ವರ ಮಂದಿರ ರಸ್ತೆಗಳು ಜನ ಜಂಗುಳಿಯಿಂದ ಕೂಡಿರುತ್ತದೆ.
ಅಧಿಕಾರಿಗಳು ಮಾತ್ರ ಜನ ಸಂದಣಿ ತಪ್ಪಿಸುವ ಕಾರ್ಯಕ್ಕೆ ಮುಂದಾಗುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ನಗರದಲ್ಲಿ ಕೊರೊನಾ ಭೀತಿ ಮತ್ತಷ್ಟು ಹೆಚ್ಚಾಗಿದೆ.