ಮುದ್ದೇಬಿಹಾಳ (ವಿಜಯಪುರ):ಸಾಮಾಜಿಕ ಅಂತರ ಕಾಪಾಡುವಂತೆ ಸರ್ಕಾರ ತಿಳಿ ಹೇಳುತ್ತಿದ್ದರೂ ಜನ ಮಾತ್ರ ಇದ್ಯಾವುದನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಸರ್ಕಾರದ ನಿಯಮಾವಳಿ ಪ್ರಕಾರ ಬಸ್ಗಳಲ್ಲಿ ಗರಿಷ್ಠ 30 ಪ್ರಯಾಣಿಕರು ಮಾತ್ರ ಪ್ರಯಾಣಿಸಬೇಕೆಂಬ ನಿಯಮ ಇದೆ. ಆದರೆ ಈ ನಿಯಮ ಉಲ್ಲಂಘಿಸಿ 60ಕ್ಕೂ ಹೆಚ್ಚು ಜನ ಬಸ್‌ನಲ್ಲಿ ಪ್ರಯಾಣಿಸಿದ ಘಟನೆ ಬೆಳಕಿಗೆ ಬಂದಿದೆ.
ಸಾಮಾಜಿಕ ಅಂತರ ಮರೆತು ಒಂದೇ ಬಸ್‌ನಲ್ಲಿ 60ಕ್ಕೂ ಹೆಚ್ಚು ಮಂದಿ ಪ್ರಯಾಣ! - KSRTC Service
ಲಾಕ್ಡೌನ್ ಸಡಿಲಿಕೆಯಾದ ಹಿನ್ನೆಲೆ ಸಾರಿಗೆ ಸೇವೆ ಆರಂಭವಾಗಿದೆ. ಅದರಂತೆ ಬಸ್‌ನಲ್ಲಿ ಕಡಿಮೆ ಪ್ರಮಾಣದ ಪ್ರಯಾಣಿಕರನ್ನು ಸಾಮಾಜಿಕ ಅಂತರ ಕಾಪಾಡಿಕೊಂಡು ಕರೆದೊಯ್ಯುವಂತೆ ಸರ್ಕಾರ ಸೂಚಿಸಿದೆ. ಆದರೆ ಸರ್ಕಾರಿ ಬಸ್‌ನಲ್ಲಿ 60ಕ್ಕೂ ಹೆಚ್ಚು ಜನ ಪ್ರಯಾಣಿಸಿದ್ದು, ಲಾಕ್ಡೌನ್ ನಿಯಮವನ್ನು ಉಲ್ಲಂಘಿಸಿರುವ ಘಟನೆ ಮುದ್ದೇಬಿಹಾಳದಲ್ಲಿ ಬೆಳಕಿಗೆ ಬಂದಿದೆ.
ಮುದ್ದೇಬಿಹಾಳ ಸಾರಿಗೆ ಬಸ್ ಡಿಪೋದಿಂದ ವಿಜಯಪುರಕ್ಕೆ ಸಾಮಾಜಿಕ ಅಂತರ ಮರೆತು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಹೆಚ್ಚಿನ ಜನರು ತೆರಳಿದ್ದಾರೆ. ಇದೇ ಬಸ್ನಲ್ಲಿದ್ದ ಪ್ರಯಾಣಿಕರೊಬ್ಬರು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಮುದ್ದೇಬಿಹಾಳ ಸಾರಿಗೆ ಘಟಕದಿಂದ ಹೂವಿನ ಹಿಪ್ಪರಗಿ, ಬಸವನ ಬಾಗೇವಾಡಿ, ಮನಗೂಳಿ ಮಾರ್ಗವಾಗಿ ವಿಜಯಪುರಕ್ಕೆ ತೆರಳುತ್ತಿದ್ದ ಬಸ್‌ನಲ್ಲಿ 60ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸಿದ್ದಾರೆ.
ಮೂವರು ಇರುವ ಸೀಟ್‌ಗಳಲ್ಲಿ ಇಬ್ಬರು ಕೂರಬೇಕು ಎಂಬ ನಿಯಮ ಪಾಲನೆ ಆಗಿಲ್ಲ. ಅಲ್ಲದೇ ಬಸ್‌ನಲ್ಲಿ ನಿಂತು ಪ್ರಯಾಣಿಸಲು ಅವಕಾಶ ಇಲ್ಲದಿದ್ದರೂ 10 ಜನ ನಿಂತುಕೊಂಡೇ ಪ್ರಯಾಣಿಸಿದ್ದಾರೆ. ಬಸ್‌ನಲ್ಲಿ ನಿಗದಿಗಿಂತ ಹೆಚ್ಚಿನ ಜನರನ್ನು ಸಾಗಿಸಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.