ಕರ್ನಾಟಕ

karnataka

ETV Bharat / state

ಕ್ವಾರಂಟೈನ್​ ಸೀಲ್ ಹಾಕಿಸಿಕೊಂಡಿದ್ದ ವ್ಯಕ್ತಿ ಓಡಾಟದಿಂದ ವಿಜಯಪುರದಲ್ಲಿ ಹೆಚ್ಚಿದ ಆತಂಕ - ಕ್ವಾರಂಟೈನ್​ ಸೀಲ್​ ವ್ಯಕ್ತಿ ಸುದ್ದಿ,

ಕ್ವಾರಂಟೈನ್​ ಸೀಲ್​ ಹೊಂದಿರುವ ವ್ಯಕ್ತಿಯ ಓಡಾಟದಿಂದ ಜನರು ಗಾಬರಿಗೊಂಡಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

Quarantine seal man, People fear from Quarantine seal man, Quarantine seal man news, Vijayapura news, vijayapura Quarantine seal man news, ಕ್ವಾರಂಟೈನ್​ ಸೀಲ್​ ವ್ಯಕ್ತಿ, ಕ್ವಾರಂಟೈನ್​ ಸೀಲ್​ ವ್ಯಕ್ತಿಯಿಂದ ಜನರಲ್ಲಿ ಭಯ, ವಿಜಯಪುರ  ಕ್ವಾರಂಟೈನ್​ ಸೀಲ್​ ವ್ಯಕ್ತಿ ಸುದ್ದಿ,  ಕ್ವಾರಂಟೈನ್​ ಸೀಲ್​ ವ್ಯಕ್ತಿ ಸುದ್ದಿ,
ಕ್ವಾರಂಟೈನ್​ ಸೀಲ್ ವ್ಯಕ್ತಿ ಓಡಾಟದಿಂದ ನಗರದಲ್ಲಿ ಹೆಚ್ಚಿದ ಆತಂಕ

By

Published : Jul 8, 2020, 1:46 PM IST

ವಿಜಯಪುರ:ಅಪರಿಚಿತ ವ್ಯಕ್ತಿಯ ಓಡಾಟದಿಂದ ನಗರದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.

ಕೈಗೆ ಕ್ವಾರಂಟೈನ್ ಸೀಲ್ ಹೊಂದಿದ್ದ ವ್ಯಕ್ತಿಯ ಓಡಾಟದಿಂದ ಜನತೆ ಭಯಭೀತರಾಗಿದ್ದಾರೆ. ನಗರದ ಸ್ಟೇಷನ್ ರಸ್ತೆಯ ಬಡಿಕಮಾನ ಬಸ್ ನಿಲ್ದಾಣದಲ್ಲಿ ವ್ಯಕ್ತಿ ಕುಳಿತಿದ್ದು, ಇದು ಸಾರ್ವಜನಿಕರಲ್ಲಿ ಹಲವು ಅನುಮಾನಗಳನ್ನು ಮೂಡಿಸಿವೆ.

ಕ್ವಾರಂಟೈನ್​ ಸೀಲ್ ಹೊಂದಿದ್ದ ವ್ಯಕ್ತಿ ಓಡಾಟದಿಂದ ನಗರದಲ್ಲಿ ಹೆಚ್ಚಿದ ಆತಂಕ

ಇನ್ನು, ಆ ವ್ಯಕ್ತಿ ಕ್ವಾರಂಟೈನ್​ನಿಂದ ತಪ್ಪಿಸಿಕೊಂಡು ಬಂದಿರುವ ಶಂಕೆ ವ್ಯಕ್ತವಾಗಿದೆ. ಹೋಂ ಕ್ವಾರಂಟೈನ್​ನಲ್ಲಿದ್ದನೋ ಅಥವಾ ಸಾಂಸ್ಥಿಕ ಕ್ವಾರಂಟೈನ್​ನಲ್ಲಿ ಇದ್ದನೋ ಎಂಬುದು ತಿಳಿದುಬರಬೇಕಾಗಿದೆ.

ಸೀಲ್ ಹೊಂದಿದ್ದ ವ್ಯಕ್ತಿಯ ಓಡಾಟದಿಂದ ಜನರಲ್ಲಿ ಸದ್ಯ ಆತಂಕ ಮೂಡಿದ್ದು, ಕೂಡಲೇ ಆತನನ್ನು ಕ್ವಾರಂಟೈನ್ ಮಾಡಬೇಕು ಎಂದು ಜನರು ಆಗ್ರಹಿಸಿದ್ದಾರೆ.

ABOUT THE AUTHOR

...view details