ವಿಜಯಪುರ: ಎಪಿಎಂಸಿಯಲ್ಲಿ ಲಾಕ್ಡೌನ್ ಆದೇಶ ಉಲ್ಲಂಘಿಸಿ ತರಕಾರಿ, ಹಣ್ಣು ವ್ಯಾಪಾರ ಮಾಡಲಾಗಿದೆ.
ವಿಜಯಪುರದಲ್ಲಿ ಲಾಕ್ಡೌನ್ಗೆ ಡೋಂಟ್ಕೇರ್: ಎಲ್ಲೆಂದರಲ್ಲಿ ಜನ ಸಮೂಹ
ಎಪಿಎಂಸಿಯಲ್ಲಿ ತರಕಾರಿ ಮಾರಾಟಕ್ಕೆ ಅನುಮತಿ ನೀಡಿದೆ. ಆದರೆ, ಮಾರುಕಟ್ಟೆಗೆ ಬರುವ ಜನರು ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬೇಕಾಬಿಟ್ಟಿಯಾಗಿ ನಡೆದುಕೊಳ್ಳುತ್ತಿದ್ದಾರೆ.
ಹಲವು ದಿನಗಳಿಂದ ಲಾಕ್ಡೌನ್ ಇರುವ ಕಾರಣ ಎಪಿಎಂಸಿ ಮಾರುಕಟ್ಟೆಗೆ ಜಿಲ್ಲಾಡಳಿತ ನಿರ್ಬಂಧ ಹೆರಲಾಗಿತ್ತು. ಬಳಿಕ ಸಾರ್ವಜನಿಕರಿಗೆ ತರಕಾರಿ, ಹಣ್ಣು ಕೊರತೆಯಾಗಬಾರದು ಎಂದು ಜಿಲ್ಲಾಡಳಿತ ಬೆಳಗಿನ ಜಾವ 4 ರಿಂದ 7 ಗಂಟೆಯವರಿಗೆ ಎಪಿಎಂಸಿಯಲ್ಲಿ ತರಕಾರಿ ಮಾರಾಟಕ್ಕೆ ಅನುಮತಿ ನೀಡಿದೆ. ಆದರೆ, ಮಾರುಕಟ್ಟೆಗೆ ಬರುವ ಜನರು ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬೇಕಾಬಿಟ್ಟಿಯಾಗಿ ನಡೆದುಕೊಳ್ಳುತ್ತಿದ್ದಾರೆ.
ಇನ್ನು ರಸ್ತೆಬದಿಯಲ್ಲೂ ಕೂಡ ತರಕಾರಿ ಮಾರಾಟಮಾಡಲಾಗುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗುಂಪಾಗಿ ತರಕಾರಿ ಮಾರಾಟ ಮಾಡುತ್ತಿದ್ದು, ಜನರ ಬೇಜವಬ್ದಾರಿಗೆ ಹಿಡಿದ ಕನ್ನಡಿಯಂತಿದೆ.