ವಿಜಯಪುರ:ನಗರದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಹೆಚ್ಚಾಗಿದ್ದರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನರು ತರಕಾರಿ ವ್ಯಾಪಾರದಲ್ಲಿ ತೊಡಗಿದ ಘಟನೆ ನಗರ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ನಡೆದಿದೆ.
ವಿಜಯಪುರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ತರಕಾರಿ ಖರೀದಿಸಲು ಮುಗಿಬಿದ್ದ ಜನ - Vijayapura APMC market
ಸಾಮಾಜಿಕ ಅಂತರ ಕಾಯ್ದುಕೊಂಡು ಖರೀದಿಗೆ ಮುಂದಾಗುವಂತೆ ಜಿಲ್ಲಾಡಳಿತ ಎಷ್ಟೇ ಮನವಿ ಮಾಡಿದರೂ ಜನರು ಮಾತ್ರ ಅದನ್ನು ಪಾಲಿಸದೆ ತರಕಾರಿ ವ್ಯಾಪಾರ ಮಾಡುತ್ತಿದ್ದ ಘಟನೆ ನಗರದ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ನಡೆದಿದೆ.
ಎಪಿಎಂಸಿ ಮಾರುಕಟ್ಟೆಯಲ್ಲಿ ಜನ ದಟ್ಟಣೆ ಹೆಚ್ಚಾಗುತ್ತಿರುವ ಕಾರಣ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ನಗರದ 5 ಭಾಗಗಳಲ್ಲಿ ಮಾರುಕಟ್ಟೆ ವಿಂಗಡಣೆ ಮಾಡಿ ತರಕಾರಿ ಹಾಗೂ ಹಣ್ಣಿನ ವಹಿವಾಟಿಗೆ ಅನುಕೂಲತೆ ಮಾಡಿ ಕೊಟ್ಟಿದ್ದರು. ಇನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ಖರೀದಿಗೆ ಮುಂದಾಗುವಂತೆ ಜಿಲ್ಲಾಡಳಿತ ಎಷ್ಟೇ ಮನವಿ ಮಾಡಿದರೂ ಜನರು ಮಾತ್ರ ನಮಗೂ ಇದಕ್ಕೂ ತಮಗೂ ಸಂಬಂಧವಿಲ್ಲದಂತೆ ಗುಂಪು ಗುಂಪಾಗಿ ತರಕಾರಿ ವ್ಯಾಪಾರಲ್ಲಿ ತೊಡಗಿದ್ದಾರೆ.
ಇತ್ತ ಎಂಪಿಎಂಸಿ ಮಾರುಕಟ್ಟೆಯ ಬೀದಿ ವ್ಯಾಪಾರಿಗಳಿಗೆ ತರಕಾರಿ ಮಾರಾಟಕ್ಕೆ ಮಾರ್ಕಿಂಗ್ ಮಾಡಿದ್ದರೂ, ಸರ್ಕಾರದ ಆದೇಶವನ್ನು ಗಾಳಿಗೆ ತೂರಲಾಗಿದೆ. ನಗರದಲ್ಲಿ 39 ಜನರಿಗೆ ಕೊರೊನಾ ವೈರಾಣು ಧೃಡ ಪಟ್ಟರೂ ತರಕಾರಿ ಮಾರುಕಟ್ಟೆಗೆ ಕೆಲ ಜನರು ಮುಖಕ್ಕೆ ಮಾಸ್ಕ್ ಧರಿಸಿದೆ ವ್ಯಾಪಾರದಲ್ಲಿ ತೊಡಗಿದ್ದಾರೆ.