ವಿಜಯಪುರ:ಕೊರೊನಾ ನಿಯಂತ್ರಣಕ್ಕೆ ಸರ್ಕಾರ ವಿಧಿಸಿದ ನಿಯಮಗಳನ್ನು ಗಾಳಿಗೆ ತೂರಿ ಜಾತ್ರೆ ನಡೆಸಿದ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ತೋಂಟಾಪುರ ಗ್ರಾಮದಲ್ಲಿ ನಡೆದಿದೆ.
ಕೊರೊನಾ ವೈರಸ್ ಮರೆತು ಜಾತ್ರೆ ಆಚರಿಸಿದ ಜನರು - ಜಾತ್ರೆ
ವಿಜಯಪುರ ಜಿಲ್ಲೆ ತೋಂಟಾಪುರ ಗ್ರಾಮದ ಜನತೆ ಸರ್ಕಾರ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಹೆಚ್ಚು ಜನ ಒಂದೆಡೆ ಸೇರಿ ಜಾತ್ರೆ ಮಾಡಿರುವ ಘಟನೆ ನಡೆದಿದೆ.

ಸರ್ಕಾರದ ಕೋವಿಡ್ ನಿಯಮಗಳನ್ನು ಪಾಲನೆ ಮಾಡದೆ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗ್ರಾಮಸ್ಥರೆಲ್ಲರೂ ಶ್ರಾವಣ ಮಾಸ ಮುಗಿದ ಬಳಿಕ ನಡೆಯೋ ಬ್ರಹ್ಮ ದೇವರ ಜಾತ್ರೆ ನಡೆಸಿದ್ದಾರೆ. ಇತ್ತ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ರೂ ಯಾವುದಕ್ಕೂ ಕ್ಯಾರೆ ಎನ್ನದೆ ವೃದ್ಧರು, ಮಕ್ಕಳು ಸಹ ಜಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
ಪಲ್ಲಕ್ಕಿ ಉತ್ಸವದಲ್ಲಿ ಕೂಡ ಜನರು ಕೊರೊನಾ ತಡೆಗೆ ಜಿಲ್ಲಾಡಳಿತದ ಕ್ರಮಗಳನ್ನೆ ಮರೆತು ಜಾತ್ರೆ ಮಾಡಿದ್ದಾರೆ. ಸ್ಥಳೀಯ ಮಟ್ಟದ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗದಿರೋದು ಗ್ರಾಮಸ್ಥರು ರಾಜಾರೋಷವಾಗಿ ಜಾತ್ರೆ ನಡೆಸಲು ದಾರಿ ಮಾಡಿಕೊಟ್ಟಂತಾಗಿದೆ.