ಕರ್ನಾಟಕ

karnataka

ETV Bharat / state

ಆರ್ಥಿಕ ಸಂಕಷ್ಟದಲ್ಲಿರುವ ಸಮುದಾಯಗಳಿಗೆ ವಿಶೇಷ ಪ್ಯಾಕೇಜ್ ನೀಡಲು ಆಗ್ರಹಿಸಿ ಡಿಸಿಗೆ ಮನವಿ - pecial package for poor communities

ನಗರದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಗೋಂಧಳಿ ಸಮುದಾಯದ ಜನರು, ಕೊರೊನಾ ಭೀತಿಯಿಂದ ಅನೇಕ ಸಮುದಾಯದಗಳು ತಿನ್ನಲು ಆಹಾರವಿಲ್ಲದೆ ಆರ್ಥಿಕ ಸಂಕಷ್ಟದ ಹಾದಿಯಲ್ಲಿವೆ. ಹಾಗಾಗಿ ವಿಶೇಷ ಪ್ಯಾಕೇಜ್​ ಘೋಷಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

pecial-package-for-poor-communities-in-financial-appeal-to-vijayapura-dc
ಆರ್ಥಿಕ ಸಂಕಷ್ಟದಲ್ಲಿರುವ ಸಮುದಾಯಗಳಿಗೆ ವಿಶೇಷ ಪ್ಯಾಕೇಜ್ ನೀಡಬೇಕು: ಗೋಂಧಳಿ ಮುಖಂಡರಿಂದ ವಿಜಯಪುರ ಡಿಸಿಗೆ ಮನವಿ..!

By

Published : May 8, 2020, 8:30 PM IST

ವಿಜಯಪುರ: ಲಾಕ್‌ಡೌನ್​​ನಿಂದ ಆರ್ಥಿಕ ಸಂಕಷ್ಟದಲ್ಲಿರುವ ಗೋಂಧಳಿ, ಬುಡಬುಡಕೆ, ಜೋಶಿ ಹಾಗೂ ವಾಸುದೇವ ಸಮುದಾಯಗಳಿಗೆ ಸರ್ಕಾರ ವಿಶೇಷ ಪ್ಯಾಕೇಜ್ ನೀಡುವಂತೆ ಒತ್ತಾಯಿಸಿ ವಿಜಯಪುರ ಗೋಂಧಳಿ ಸಮುದಾಯದ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಆರ್ಥಿಕ ಸಂಕಷ್ಟದಲ್ಲಿರುವ ಸಮುದಾಯಗಳಿಗೆ ವಿಶೇಷ ಪ್ಯಾಕೇಜ್ ನೀಡಲು ಡಿಸಿಗೆ ಮನವಿ

ನಗರದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಗೋಂಧಳಿ ಸಮುದಾಯದ ಜನರು, ಕೊರೊನಾ ಭೀತಿಯಿಂದ ಅನೇಕ ಸಮುದಾಯದಗಳು ತಿನ್ನಲು ಆಹಾರವಿಲ್ಲದೆ ಆರ್ಥಿಕ ಸಂಕಷ್ಟದ ಹಾದಿಯಲ್ಲಿವೆ. ಇನ್ನು ಗೋಂಧಳಿ, ಬುಡಬುಡಕೆ, ಜೋಶಿ ಹಾಗೂ ವಾಸುದೇವ ಸಮುದಾಯದಗಳು ಹೆಚ್ಚಾಗಿ ಕೂಲಿ ಕೆಲಸಗಳನ್ನ ನಂಬಿಕೊಂಡು ಬದಕು ಕಟ್ಟಿಕೊಂಡಿದ್ದರು.

ಹೀಗಾಗಿ ಕಳೆದ ಒಂದೂವರೆ ತಿಂಗಳಿಂದ ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಮನೆಯಲ್ಲಿರುವಂತಾಗಿದೆ. ತುತ್ತು ಅನ್ನಕ್ಕಾಗಿ ಕಷ್ಟ ಪಡುವ ವಾತಾವರಣ ನಿರ್ಮಾಣವಾಗಿದ್ದು, ಸರ್ಕಾರ ನೆರವಿಗೆ ಬರುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ABOUT THE AUTHOR

...view details