ಕರ್ನಾಟಕ

karnataka

ETV Bharat / state

ಸಿಂದಗಿ ಪುರಸಭೆ ಚುನಾವಣೆ: ಶೇ.68.73 ರಷ್ಟು ಮತದಾನ - ವಿಜಯಪುರ ಜಿಲ್ಲೆಯ ಸಿಂದಗಿ ಪುರಸಭೆ

ಸಿಂದಗಿ ಪುರಸಭೆಯ 23 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶೇ. 68.73 ರಷ್ಟು ಮತದಾನ ನಡೆದಿದೆ. ಮಂಗಳವಾರ ಫಲಿತಾಂಶ ಹೊರಬೀಳಲಿದೆ.

Peacefully held Sindagi municipal election
ಶಾಂತಿಯುತವಾಗಿ ನಡೆದ ಸಿಂದಗಿ ಪುರಸಭೆ ಚುನಾವಣೆ

By

Published : Feb 9, 2020, 11:33 PM IST

Updated : Feb 9, 2020, 11:46 PM IST

ವಿಜಯಪುರ: ಸಿಂದಗಿ ಪುರಸಭೆಯ 23 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶೇ. 68.73 ರಷ್ಟು ಮತದಾನ ನಡೆದಿದೆ.

ಶಾಂತಿಯುತವಾಗಿ ನಡೆದ ಸಿಂದಗಿ ಪುರಸಭೆ ಚುನಾವಣೆ

ಬೆಳಿಗ್ಗೆ 7 ರಿಂದ ಸಾಯಂಕಾಲ 5 ವರೆಗೆ ಮತದಾನ ಶಾಂತಿಯುತವಾಗಿ ನಡೆಯಿತು. ಒಟ್ಟು 84 ಜನ ಚುನಾವಣೆ ಕಣದಲ್ಲಿದ್ದು, ಇವರಲ್ಲಿ ಬಿಜೆಪಿಯಿಂದ 20, ಕಾಂಗ್ರೆಸ್​​ನಿಂದ 19 ಹಾಗೂ ಜೆಡಿಎಸ್ 23, ಬಿಎಸ್​ಪಿಯಿಂದ 6 ಅಭ್ಯಥಿಗಳು ಹಾಗೂ 16 ಪಕ್ಷೇತರು ತಮ್ಮ ಭವಿಷ್ಯ ಪರೀಕ್ಷಿಸಿಕೊಳ್ಳುತ್ತಿದ್ದಾರೆ.

ಮಂಗಳವಾರ ಮತ ಎಣಿಕೆ ನಡೆಯಲಿದ್ದು, ಅಂದು ಅಧಿಕಾರದ ಚುಕ್ಕಾಣೆ ಯಾರು ಹಿಡಿಯಲಿದ್ದಾರೆ ಎಂದು ತಿಳಿಯಲಿದೆ.

Last Updated : Feb 9, 2020, 11:46 PM IST

ABOUT THE AUTHOR

...view details