ಕರ್ನಾಟಕ

karnataka

ETV Bharat / state

ಕೋವಿಡ್​​-ಲಾಕ್​​ಡೌನ್​ ಹೊಡೆತ : ಬಾಲ ಕಾರ್ಮಿಕರ ಸಂಖ್ಯೆಯಲ್ಲಿ ಹೆಚ್ಚಳ - ಬಳ್ಳಾರಿ ಬಾಲ ಕಾರ್ಮಿಕರು

ಕೋವಿಡ್​, ಲಾಕ್​ಡೌನ್​ನಿಂದ ತತ್ತರಿಸಿದ್ದ ಪ್ರತಿ ಕ್ಷೇತ್ರಗಳು ಚೇತರಿಸಿಕೊಳ್ಳುತ್ತಿರೋದ್ರಿಂದ ಜನತೆ ಆಶಾಭಾವನೆ ಹೊಂದಿದ್ದಾರೆ. ಆದರೆ, ಈಗಲೂ ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚಳವಾಗ್ತಿರೋದು ಮಾತ್ರ ದುರಂತ.

ಕೋವಿಡ್​​-ಲಾಕ್​​ಡೌನ್​ ಹೊಡೆತ : ಬಾಲ ಕಾರ್ಮಿಕರ ಸಂಖ್ಯೆಯಲ್ಲಿ ಭಾರಿ ಹೆಚ್ಚಳ

By

Published : Feb 28, 2021, 10:53 PM IST

ಕೊರೊನಾ ಅದ್ಯಾವ ಮಟ್ಟಿಗೆ ಜಗತ್ತನ್ನು ತಲ್ಲಣಗೊಳಿಸಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಕಲಿಯುವ ಮಕ್ಕಳ ಮೇಲಂತೂ ಇದು ಬೀರಿದ ಪ್ರಭಾವ ಅಷ್ಟಿಷ್ಟಲ್ಲ.

ಗಣಿಜಿಲ್ಲೆ ಬಳ್ಳಾರಿಯ ಬಹುತೇಕ ವಿದ್ಯಾರ್ಥಿಗಳು ಬಡಕುಟುಂಬಕ್ಕೆ ಸೇರಿದವರು. ಅದೆಷ್ಟೋ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಕೊಡುವ ಬಿಸಿಯೂಟಕ್ಕಾಗಿಯೇ ಶಾಲೆಗೆ ಹೋದದ್ದುಂಟು. ಶಾಲೆಗಳು ಬಂದ್​ ಆದ್ಮೇಲೆ ಮಕ್ಕಳು ಆನ್​ಲೈನ್​ ಶಿಕ್ಷಣ ಪಡೆಯುವಷ್ಟು ಶಕ್ತರಾಗಿರಲಿಲ್ಲ. ಕೋವಿಡ್​, ಲಾಕ್​ಡೌನ್​ನಿಂದ ಒಂದೊತ್ತಿನ ಊಟಕ್ಕೂ ಪರದಾಟ. ಹಾಗಾಗಿ, ಪೋಷಕರು ತಮ್ಮ ಮಕ್ಕಳನ್ನು ಕೆಲಸಕ್ಕೆ ಕೊಂಡೊಯ್ಯಲು ಆರಂಭಿಸಿದರು.

ಕೋವಿಡ್​​-ಲಾಕ್​​ಡೌನ್​ ಹೊಡೆತ : ಬಾಲ ಕಾರ್ಮಿಕರ ಸಂಖ್ಯೆಯಲ್ಲಿ ಭಾರಿ ಹೆಚ್ಚಳ

ಶೇಕಡಾ 30ರಷ್ಟು ಬಾಲಕಾರ್ಮಿಕರು ನಾನಾ ವಲಯಗಳಲ್ಲಿ ಕೆಲಸ ಮಾಡುತ್ತಾ ತಮ್ಮ ಪೋಷಕರ ಹೆಗಲಿಗೆ ಹೆಗಲು ಕೊಟ್ಟಿದ್ದಾರೆ. 2018ರಲ್ಲಿನ ಸಮೀಕ್ಷೆಯ ಪ್ರಕಾರ ಹೋಲಿಕೆ ಮಾಡಿದರೆ, ಈ ಸಾಲಿನಲ್ಲಿ ಅನಿವಾರ್ಯವಾಗಿ ಬಾಲಕಾರ್ಮಿಕರ ಸಂಖ್ಯೆ ಹೆಚ್ಚಾಗಿರುವುದು ಬೆಳಕಿಗೆ ಬಂದಿದೆ.

ಇನ್ನು, ವಿಜಯಪುರದ ಯುಆರ್​​ಡಿಎಸ್ ಸಮೀಕ್ಷೆಯಲ್ಲಿ ಬಡ ಕಾರ್ಮಿಕ ವರ್ಗದ ಮಕ್ಕಳು ಸದ್ಯ ಶಾಲೆ ತೊರೆದು ಬಾಲ ಕಾರ್ಮಿಕರಾಗಿ ಹತ್ತು ಹಲವು ಅಸಂಘಟಿತ ವಲಯಗಳಲ್ಲಿ ಕೂಲಿ ಕೆಲಸ ಮಾಡುತ್ತಿರುವ ವಿಚಾರ ಬಯಲಾಗಿದೆ. ಇದೀಗ ಶಾಲೆ ಆರಂಭಗೊಂಡಿದ್ದರೂ ಸಹ ದುಡಿಯಲು ಹೋಗುತ್ತಿರುವ ಮಕ್ಕಳು ವಾಪಸ್ ಶಾಲೆಗೆ ಬರುವ ಆಸಕ್ತಿ ‌ಕಳೆದುಕೊಂಡಿದ್ದಾರೆ.

ಈಗ ಸರ್ಕಾರ ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳದಿದ್ರೆ ಎಷ್ಟೋ ಪ್ರತಿಭಾನ್ವಿತ ವಿದ್ಯಾರ್ಥಿಗಳ ಭವಿಷ್ಯ ಕಮರುವ ಆತಂಕವಿದೆ.

ABOUT THE AUTHOR

...view details