ಕರ್ನಾಟಕ

karnataka

ETV Bharat / state

ಆಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಯ : ಡಿಸಿ ಮೊರೆ ಹೋದ ಕೋವಿಡ್ ಆಸ್ಪತ್ರೆ ಮುಖ್ಯಸ್ಥ - ಆಕ್ಸಿಜನ್ ಕೊರತೆ

ಕೂಡಲೇ ನಿಗದಿತ ಪ್ರಮಾಣದ ಆಕ್ಸಿಜನ್ ಪೂರೈಕೆ ಮಾಡಲು ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಬೇಕೆಂದು ಡಿಸಿಗೆ ಮನವಿ ಮಾಡಿದ್ದಾರೆ..

oxygen Shortage  in Vijaypur Covid Hospital
ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ

By

Published : May 12, 2021, 1:40 PM IST

ವಿಜಯಪುರ :ನಗರದ ಹೊರವಲಯದ ಅಲ್ ಅಮೀನ್ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಉಂಟಾಗಿದೆ.

ಆಕ್ಸಿಜನ್ ಪೂರೈಕೆ ಮಾಡುವ ಎಂ.ಆರ್ ಇಂಡಸ್ಟ್ರೀಸ್ ಸರಿಯಾಗಿ ಪೂರೈಕೆ ಮಾಡುತ್ತಿಲ್ಲವೆಂದು ಆಸ್ಪತ್ರೆಯ ಮುಖ್ಯಸ್ಥ ಡಾ ಎಸ್‌.ಎಂ‌ ರಾಶಿನಕರ್ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಅವರಿಗೆ ದೂರು ನೀಡಿದ್ದಾರೆ.

ನಿತ್ಯ 40 ಆಕ್ಸಿಜನ್ ಸಿಲಿಂಡರ್ ಅವಶ್ಯಕತೆಯಿದೆ. ಆದರೆ, ಎಂ.ಆರ್ ಇಂಡಸ್ಟ್ರೀಸ್ ಅವರು ಕೇವಲ 10 ಸಿಲಿಂಡರ್‌ ಮಾತ್ರ ನೀಡುತ್ತಿದ್ದಾರೆ. ಆಸ್ಪತ್ರೆಯಲ್ಲಿ 75 ಬೆಡ್‌ಗಳನ್ನು ಕೊರೊನಾ ಪೀಡಿತರಿಗೆ ಮೀಸಲಿಡಲಾಗಿದೆ.

ಈ ಪೈಕಿ 40 ಆಕ್ಸಿಜನ್ ಬೆಡ್​ಗಳಿವೆ. ಆಕ್ಸಿಜನ್ ಪೂರೈಕೆ ಸರಿಯಾಗಿ ಮಾಡದ ಕಾರಣ ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡಲು ಸಮಸ್ಯೆಯಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ದೂರಿನ ಪ್ರತಿ

ಓದಿ : ವ್ಯಾಕ್ಸಿನ್ ಲಭ್ಯತೆ ಇಲ್ಲ.. ದಾಸ್ತಾನು ಇಂದಿಗೆ ಮುಗಿಯಲಿದೆ : ಗೌರವ್ ಗುಪ್ತ

ಕೂಡಲೇ ನಿಗದಿತ ಪ್ರಮಾಣದ ಆಕ್ಸಿಜನ್ ಪೂರೈಕೆ ಮಾಡಲು ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಬೇಕೆಂದು ಡಿಸಿಗೆ ಮನವಿ ಮಾಡಿದ್ದಾರೆ.

ABOUT THE AUTHOR

...view details