ಕರ್ನಾಟಕ

karnataka

ETV Bharat / state

ಮುದ್ದೇಬಿಹಾಳ : ಜೂನ್​​​ ಅಂತ್ಯಕ್ಕೆ ನಿಮಿಷಕ್ಕೆ 500 ಲೀ. ಆಕ್ಸಿಜನ್ ಉತ್ಪಾದನೆಯ ಘಟಕ ಲೋಕಾರ್ಪಣೆ - ಆಕ್ಸಿಜನ್ ಸಿಲಿಂಡರ್

ಮೂರ್ನಾಲ್ಕು ತಿಂಗಳ ಹಿಂದೆಯೇ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ಆಮ್ಲಜನಕ ಘಟಕ ತಯಾರಿಕೆಗೆ ಮಂಜೂರಾತಿ ಮಾಡಿಸಿದ್ದು, ಇದೀಗ ಜೂನ್ ಅಂತ್ಯದಲ್ಲಿ ಕೆಲಸ ಆರಂಭಿಸುವ ಸಾಧ್ಯತೆ ಇದೆ..

ಆಕ್ಸಿಜನ್ ಉತ್ಪಾದನೆಯ ಘಟಕ ಲೋಕಾರ್ಪಣೆ
ಆಕ್ಸಿಜನ್ ಉತ್ಪಾದನೆಯ ಘಟಕ ಲೋಕಾರ್ಪಣೆ

By

Published : May 16, 2021, 6:28 PM IST

ಮುದ್ದೇಬಿಹಾಳ(ವಿಜಯಪುರ) :ಎಲ್ಲೆಡೆ ಕೋವಿಡ್ ರೋಗಿಗಳಿಗೆ ಆಮ್ಲಜನಕದ ಅವಶ್ಯಕತೆ ಅಧಿಕವಾಗಿದೆ. ಕೆಲವಡೆ ಆಮ್ಲಜನಕದ ಕೊರತೆಯಿಂದ ಸಾವುಗಳೂ ಸಂಭವಿಸಿವೆ. ಈ ಹಿನ್ನೆಲೆ ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ.

ಮೂರ್ನಾಲ್ಕು ತಿಂಗಳ ಹಿಂದೆಯೇ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ಆಮ್ಲಜನಕ ಘಟಕ ತಯಾರಿಕೆಗೆ ಮಂಜೂರಾತಿ ಮಾಡಿಸಿದ್ದು, ಇದೀಗ ಜೂನ್ ಅಂತ್ಯದಲ್ಲಿ ಕೆಲಸ ಆರಂಭಿಸುವ ಸಾಧ್ಯತೆ ಇದೆ.

ಜೂನ್​​​ ಅಂತ್ಯಕ್ಕೆ ನಿಮಿಷಕ್ಕೆ 500 ಲೀ. ಆಕ್ಸಿಜನ್ ಉತ್ಪಾದನೆಯ ಘಟಕ ಲೋಕಾರ್ಪಣೆ

86 ಲಕ್ಷ ರೂ. ವೆಚ್ಚದಲ್ಲಿ ನಿಮಿಷಕ್ಕೆ 500 ಲೀಟರ್​ ಆಮ್ಲಜನಕ ಉತ್ಪಾದಿಸುವ ಈ ಸ್ಥಾವರದಿಂದ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಸಮುದಾಯ ಆರೋಗ್ಯ ಕೇಂದ್ರ, ಪಕ್ಕದ ತಾಳಿಕೋಟಿ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಆಕ್ಸಿಜನ್ ಸರಬರಾಜಾಗಲಿದೆ ಎನ್ನುತ್ತಾರೆ ಆರೋಗ್ಯ ಇಲಾಖೆಯ ಅಧಿಕಾರಿಗಳು.

ಸಿಲಿಂಡರ್‌ಗಳು ನಿರೀಕ್ಷಿತ ಮಟ್ಟದಲ್ಲಿ ಸಾಕಾಗುತ್ತಿಲ್ಲ. ಅಲ್ಲದೇ ಆಕ್ಸಿಜನ್ ಸಿಲಿಂಡರ್ ತರಬೇಕೆಂದರೂ ದೂರದ ವಿಜಯಪುರಕ್ಕೆ ಹೋಗಬೇಕು. ಅದನ್ನು ತಪ್ಪಿಸಲು ಈ ಆಕ್ಸಿಜನ್ ಘಟಕ ಮಹತ್ವದ್ದಾಗಲಿದೆ.

ಇದನ್ನೂ ಓದಿ:ಕೆಸರಿನಲ್ಲಿ ಸಿಲುಕಿ ಮರಿಯಾನೆ ಒದ್ದಾಟ: ಜೆಸಿಬಿ‌ ಸಹಾಯದಿಂದ ರಕ್ಷಣೆ

ABOUT THE AUTHOR

...view details