ವಿಜಯಪುರ: ಡೋಣಿ ನದಿ ತುಂಬಿ ಹರಿಯುತ್ತಿರುವುರಿಂದ ವಿಜಯಪುರ ಜಿಲ್ಲೆಯಲ್ಲಿ ರೈತರು ಬೆಳೆದ ಬೆಳೆಗಳೆಲ್ಲ ನೀರಿನಲ್ಲಿ ನಿಲ್ಲುವಂತಾಗಿದೆ. ಜಿಲ್ಲೆಯ ತಿಕೋಟಾ ಭಾಗದ ಕಣಮುಚನಾಳ, ಧನ್ಯಾಳ ಭಾಗದಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಡೋಣಿ ನದಿ ಉಕ್ಕಿ ಹರಿಯುತ್ತಿದ್ದು, ಅಪಾರ ಪ್ರಮಾಣದ ಜೋಳ, ತೊಗರಿ ಬೆಳೆಗಳು ಜಲಾವೃತವಾಗಿವೆ.
ಉಕ್ಕಿ ಹರಿದ ಡೋಣಿ ನದಿ.. ಅಪಾರ ಪ್ರಮಾಣದ ಬೆಳೆ ನಾಶ.. ಜೋಳ, ತೊಗರಿ ಜಲಾವೃತ! - ಸಾರವಾಡ ಗ್ರಾಮದಿಂದ ವಿಜಯಪುರ
ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಜಿಲ್ಲೆಯ ತಿಕೋಟಾ ಭಾಗದ ಕಣಮುಚನಾಳ, ಧನ್ಯಾಳ ಭಾಗದಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಮಳೆಯಿಂದಾಗಿ ಡೋಣಿ ನದಿ ಉಕ್ಕಿ ಹರಿಯುತ್ತಿದ್ದು ಹೊಲಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಜೋಳ, ತೊಗರಿ ಬೆಳೆಗಳು ಜಲಾವೃತವಾಗಿದೆ.
ಇನ್ನು, ಸಾರವಾಡ ಗ್ರಾಮಸ್ಥರು ದೋಣಿ ನದಿಯ ಹೂಳು ತೆಗೆಯಬೇಕು ಎಂದು ಹಲವು ಬಾರಿ ಪ್ರತಿಭಟನೆ ಮಾಡಿದ್ದಾರೆ. ಪ್ರತಿಭಟನೆ ವಿಕೋಪಕ್ಕೆ ಹೋಗಿ ಸಾರವಾಡ ಗ್ರಾಮದಿಂದ ವಿಜಯಪುರದವರೆಗೂ ಪಾದಯಾತ್ರೆ ಕೂಡಾ ನಡೆಸಿದ್ದರು.ಆದರೆ. ಜಿಲ್ಲಾಡಳಿವಾಗಲಿ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಾಗಲಿ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಹಿನ್ನೆಲೆ ಮಳೆಯಾದರೆ ಸಾಕು ಡೋಣಿ ನದಿ ತುಂಬಿ ಹರಿಯುತ್ತ, ನದಿಯಲ್ಲಿರುವ ಹೂಳು ಹಾಗೂ ಕಂಟಿಗಳು ಬೆಳೆದ ಹಿನ್ನೆಲೆಯಲ್ಲಿ ನದಿ ನೀರು ರೈತರ ಹಲವು ಜಮೀನುಗಳಿಗೆ ನುಗ್ಗುತ್ತಿದೆ. ಇದರಿಂದಾಗಿ ಸಾವಿರಾರು ರೈತರ ಜಮೀನುಗಳಿಗೆ ನೀರು ನುಗ್ಗಿದ ಪರಿಣಾಮ ಬೆಳೆ ಸಂಪೂರ್ಣ ಹಾನಿಯಾಗಿದೆ. ಇನ್ನು, ಹಾನಿಯಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳಿಯರು ಆಗ್ರಹಿಸುತ್ತಿದ್ದಾರೆ.