ಮುದ್ದೇಬಿಹಾಳ: ತಾಲೂಕಿನ ಹಡಲಗೇರಿ ಗ್ರಾಮದಲ್ಲಿ ಮನೆ ಮನೆಗೆ ಕುಂಕುಮ ಎರಚಿದ್ದು, ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಹಡಲಗೇರಿ ಗ್ರಾಮದ ಎರಡನೇ ವಾರ್ಡ್ನಲ್ಲಿ ಒಟ್ಟು ಏಳು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಿರುವ ಏಳು ಅಭ್ಯರ್ಥಿಗಳ ಪೈಕಿ ಯಾರಾದರೂ ಹೀಗೆ ಮಾಟ ಮಂತ್ರ ಮಾಡಿಸಿ ಕುಂಕುಮ ಎರಚಿರಬಹುದಾಗಿದ್ದು, ಇದರ ಸತ್ಯ ಬಹಿರಂಗಗೊಳ್ಳಬೇಕು ಎಂದಿರುವ ಗ್ರಾಮಸ್ಥರು, ಏಳೂ ಅಭ್ಯರ್ಥಿಗಳು ಈ ಬಗ್ಗೆ ಗ್ರಾಮದ ದೇವಸ್ಥಾನದಲ್ಲಿ ಪ್ರಮಾಣ ಮಾಡಿ ಸತ್ಯ ಒಪ್ಪಿಕೊಂಡರೆ ಮಾತ್ರ ನಾಳೆ ಮತದಾನ ಮಾಡುವುದಾಗಿ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಇಲ್ಲವಾದಲ್ಲಿ ಮತದಾನವನ್ನೇ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ.