ಕರ್ನಾಟಕ

karnataka

ETV Bharat / state

ಚಳಿಯನ್ನೂ ಲೆಕ್ಕಿಸದೆ, ರಾತ್ರಿಯಲ್ಲೂ ಹೊರ ಗುತ್ತಿಗೆ ನೌಕರರ ಪ್ರತಿಭಟನೆ... ಯಾಕೆ ಗೊತ್ತಾ? - ವಿಜಯಪುರ ಸುದ್ದಿ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದ ಬಳಿ ಹೊರ ಗುತ್ತಿಗೆ ನೌಕರರು ಅಹೊರಾತ್ರೀ ಧರಣಿ ಆರಂಭಿಸಿದ್ದಾರೆ.

Out-Of-Contract Employees Protest At Night, Regardless Of The Cold
ಚಳಿಯನ್ನೂ ಲೆಕ್ಕಿಸದೇ, ರಾತ್ರಿಯಲ್ಲೂ ಹೊರ ಗುತ್ತಿಗೆ ನೌಕರರ ಪ್ರತಿಭಟನೆ... ಯಾಕೆ ಗೊತ್ತಾ?

By

Published : Dec 9, 2019, 11:55 PM IST

ವಿಜಯಪುರ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದ ಬಳಿ ಹೊರ ಗುತ್ತಿಗೆ ನೌಕರರು ಅಹೊರಾತ್ರಿ ಧರಣಿ ಆರಂಭಿಸಿದ್ದಾರೆ.

ಚಳಿಯನ್ನೂ ಲೆಕ್ಕಿಸದೇ, ರಾತ್ರಿಯಲ್ಲೂ ಹೊರ ಗುತ್ತಿಗೆ ನೌಕರರ ಪ್ರತಿಭಟನೆ... ಯಾಕೆ ಗೊತ್ತಾ?

ಹೊರ ಗುತ್ತಿಗೆ ನೌಕರರ ಸಂಬಳ ಕಳೆದ 9 ತಿಂಗಳಿನಿಂದ ನೀಡಿಲ್ಲ. ಇದರ ಜೊತೆಗೆ ಪಿಎಫ್ ಹಾಗೂ ಇಎಸ್​ಐ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನಾ ಸ್ಥಳದಲ್ಲಿಯೇ ಮಹಿಳಾ ಪ್ರತಿಭಟನಾಕಾರರು ಅಡುಗೆ ಮಾಡಿದರೂ, ಎಲ್ಲರೂ ಸೇರಿ ಸ್ಥಳದಲ್ಲಿಯೇ ಊಟ ಮಾಡಿ ಜಿಪಂ ಸಭಾಂಗಣ ಬಳಿ ನಿದ್ರೆ ಮಾಡಿ ಸರ್ಕಾರದ ವಿರುದ್ಧ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ನೇರ ನೇಮಕಾತಿ ಮಾಡಿಕೊಂಡವರ ಜೊತೆಗೆ ಹೊರ ಗುತ್ತಿಗೆ ನೌಕರರನ್ನೂ ಮುಂದುವರೆಸಬೇಕು. ಹೀಗೆ ವಿವಿದ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಧರಣಿ ಮುಂದುವರೆಸಿದ್ದಾರೆ. ಚಳಿಯಲ್ಲೂ ಕೂಡಾ ಪ್ರತಿಭಟನಾ ಸ್ಥಳದಲ್ಲೇ ಮಲಗುವುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ.

ABOUT THE AUTHOR

...view details