ವಿಜಯಪುರ:ಕೊರೊನಾ ಭೀತಿಯಿಂದ ಗರ್ಭಿಣಿಯರಿಗೆ ತುರ್ತು ಸಂದರ್ಭದಲ್ಲಿ ರಕ್ತಕ್ಕಾಗಿ ಪರದಾಟ ನಡೆಸಬಾರದೆಂದು ಭಾರತೀಯ ಜೈನ ಸಂಘಟನೆ ಹಾಗೂ ಜೀಟೋ ನೇತೃತ್ವದಲ್ಲಿ ರಕ್ತದಾನ ಶಿಬಿರ ನಡೆಸಲಾಯಿತು.
ವಿಜಯಪುರದಲ್ಲಿ ಗರ್ಭಿಣಿಯರಿಗಾಗಿ ರಕ್ತದಾನ ಶಿಬಿರ ನಡೆಸಿ ಮಾನವೀಯತೆ ಮೆರೆದ ಸಂಘಟನೆಗಳು - Blood Donation Camp
ನಗರದ ತಾರೀಕ್ ಸಿಗ್ನೇಚರ್ ಮಾಲ್ನಲ್ಲಿ ಗರ್ಭಿಣಿಯರಿಗೆ ತುರ್ತು ಸಂದರ್ಭದಲ್ಲಿ ರಕ್ತದ ಕೊರತೆಯಾಗದಿರಲಿ ಎಂದು ಜೈನ ಸಮುದಾಯದ ಸಂಘಟನೆಗಳು ರಕ್ತ ಶಿಬಿರ ನಡೆಸುವುದರ ಮೂಲಕ ಮಾನವೀಯ ಕಾರ್ಯಕ್ಕೆ ಮುಂದಾಗಿವೆ.
![ವಿಜಯಪುರದಲ್ಲಿ ಗರ್ಭಿಣಿಯರಿಗಾಗಿ ರಕ್ತದಾನ ಶಿಬಿರ ನಡೆಸಿ ಮಾನವೀಯತೆ ಮೆರೆದ ಸಂಘಟನೆಗಳು Organizing a blood donation camp for pregnant women in Vijayapura](https://etvbharatimages.akamaized.net/etvbharat/prod-images/768-512-7183674-742-7183674-1589375443322.jpg)
ವಿಜಯಪುರದಲ್ಲಿ ಗರ್ಭಿಣಿಯರಿಗಾಗಿ ರಕ್ತದಾನ ಶಿಬಿರ ನಡೆಸಿ ಮಾನವೀಯತೆ ಮೆರೆದ ಸಂಘಟನೆಗಳು
ನಗರದ ತಾರೀಕ್ ಸಿಗ್ನೇಚರ್ ಮಾಲ್ನಲ್ಲಿ ಗರ್ಭಿಣಿಯರಿಗೆ ತುರ್ತು ಸಂದರ್ಭದಲ್ಲಿ ರಕ್ತದ ಕೊರತೆಯಾಗದಿರಲಿ ಎಂದು ಜೈನ ಸಮುದಾಯದ ಸಂಘಟನೆಗಳು ರಕ್ತದಾನ ಶಿಬಿರ ನಡೆಸುವುದರ ಮೂಲಕ ಮಾನವೀಯ ಕಾರ್ಯಕ್ಕೆ ಮುಂದಾಗಿವೆ.
ಇನ್ನು ಗರ್ಭಿಣಿಯರಿಗಾಗಿ ಅನೇಕ ಜನರು ರಕ್ತ ಹುಡುಕಾಟ ನಡೆಸಸುತ್ತಿರುವುದು ಇಲ್ಲಿ ಕಂಡು ಬಂದಿತ್ತು. ಸರಿಯಾದ ಸಮಯಕ್ಕೆ ರಕ್ತ ಸಿಗದ ಸನ್ನಿವೇಶಗಳನ್ನು ಗಮಸಿದ ಜೈನ ಸಂಘಟನೆಗಳು ಇಂದು ಕ್ಯಾಂಪ್ ನಡೆಸುವ ಮೂಲಕ ಸಹಾಯಕ್ಕೆ ಮುಂದಾಗಿವೆ.