ವಿಜಯಪುರ: ಪ್ರೇಮ ವಿವಾಹಕ್ಕೆ ಅಡ್ಡಿ ಹಿನ್ನೆಲೆಯಲ್ಲಿ ಪ್ರೇಮಿಗಳು ನೇಣಿಗೆ ಶರಣಾದ ಘಟನೆ ಜಿಲ್ಲೆಯ ತಿಕೋಟಾ ತಾಲೂಕಿನ ಕನಮಡಿ ಗ್ರಾಮದ ಹೊರ ಭಾಗದ ಜಮೀನಿನಲ್ಲಿ ನಡೆದಿದೆ.
ವಿವಾಹಕ್ಕೆ ಪೋಷಕರ ಅಡ್ಡಿ: ಮನನೊಂದು ನೇಣಿಗೆ ಶರಣಾದ ಪ್ರೇಮಿಗಳು - undefined
ವಿವಾಹಕ್ಕೆ ಮನೆಯವರು ಒಪ್ಪದ ಕಾರಣ ಪ್ರೇಮಿಗಳು ನೇಣಿಗೆ ಶರಣಾದ ಘಟನೆ ಜಿಲ್ಲೆಯ ತಿಕೋಟಾ ತಾಲೂಕಿನ ಕನಮಡಿ ಗ್ರಾಮದ ಹೊರ ಭಾಗದ ಜಮೀನಿನಲ್ಲಿ ನಡೆದಿದೆ.
![ವಿವಾಹಕ್ಕೆ ಪೋಷಕರ ಅಡ್ಡಿ: ಮನನೊಂದು ನೇಣಿಗೆ ಶರಣಾದ ಪ್ರೇಮಿಗಳು](https://etvbharatimages.akamaized.net/etvbharat/prod-images/768-512-3288324-thumbnail-3x2-sucide.jpg)
ಮನನೊಂದು ನೇಣಿಗೆ ಶರಣಾದ ಪ್ರೇಮಿಗಳು
ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದ ಯುವಕ ಹಾಗೂ ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಕನಮಡಿ ಗ್ರಾಮದ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ವಿವಾಹಕ್ಕೆ ಮನೆಯವರು ಒಪ್ಪದ ಕಾರಣ ಇಬ್ಬರೂ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ತಿಕೋಟಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ತಿಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.