ವಿಜಯಪುರ: ಅಂತೂ ಇಂತೂ ವಿಜಯಪುರ ಮಹಾನಗರದಲ್ಲಿ ಪಾಲಿಕೆ ಅಧಿಕಾರಿಗಳು ಸಾರ್ವಜನಿಕರಿಗೆ ಕಲ್ಪಿಸಲಾಗಿದ್ದ ಓಪನ್ ಜಿಮ್ ಅವ್ಯವಸ್ಥೆ ಸರಿಪಡಿಸಿದ್ದಾರೆ.
ವಿಜಯಪುರದಲ್ಲಿ ಕೊನೆಗೂ ಸರಿಯಾಯ್ತು ಓಪನ್ ಜಿಮ್: ಈಟಿವಿ ಭಾರತ ವರದಿ ಫಲಶೃತಿ - ಓಪನ್ ಜಿಮ್
ವಿಜಯಪುರದ ಉದ್ಯಾನವನದಲ್ಲಿ ಸಾರ್ವಜನಿಕರಿಗೆ ವ್ಯಾಯಾಮ ಮಾಡಲು ಅನುಕೂಲವಾಗಲೆಂದು ಓಪನ್ ಜಿಮ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಜಿಮ್ ಉಪಕರಣಗಳ ಫಿಟಿಂಗ್ ಸರಿಯಾಗಿರದೆ ತೊಂದರೆಯಾಗಿತ್ತು. ಈ ಅವ್ಯವಸ್ಥೆ ಕುರಿತು ಈಟಿವಿ ಭಾರತ ವಿಸ್ತ್ರತ ವರದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.

ಮತ್ತೆ ತಯಾರಾದ ಓಪನ್ ಜಿಮ್
ಮತ್ತೆ ತಯಾರಾದ ಓಪನ್ ಜಿಮ್, ಇದು ಈಟಿವಿ ಭಾರತ ವರದಿ ಇಂಪ್ಯಾಕ್ಟ್
ನಗರದ 14 ಉದ್ಯಾನವನದಲ್ಲಿ ಸಾರ್ವಜನಿಕರಿಗೆ ವ್ಯಾಯಾಮ ಮಾಡಲು ಅನುಕೂಲವಾಗಲೆಂದು ಓಪನ್ ಜಿಮ್ ವ್ಯವಸ್ಥೆ ಅಳವಡಿಸಿದ್ದರು. ಆದರೆ ಕೆಲ ಉದ್ಯಾನವನದಲ್ಲಿ ಜಿಮ್ಗಳ ಫಿಟಿಂಗ್ ಸರಿಯಾಗಿರಲಿಲ್ಲ. ಈ ಕುರಿತು ಈಟಿವಿ ಭಾರತ ವರದಿ ಪ್ರಕಟಿಸಿತ್ತು. ವರದಿಯಿಂದ ಎಚ್ಚೆತ್ತ ಅಧಿಕಾರಿಗಳು, ನಗರದ ಗುರುಪಾದೇಶ್ವರ ನಗರದ ಉದ್ಯಾನವನದಲ್ಲಿ ಓಪನ್ ಜಿಮ್ಗೆ ಸಿಮೆಂಟಿನ ಹೊಸ ಪರ್ಸಿ ಅಳವಡಿಸಿದ್ದಾರೆ.
ಓಪನ್ ಜಿಮ್ಗೆ ಅಳವಡಿಸಿದ್ದ ಸಿಮೆಂಟ್ ಕಿತ್ತು ಹೋಗಿದ್ದ ಕಾರಣ, ವ್ಯಾಯಾಮ ಮಾಡುವಾಗ ಮಹಿಳೆಯೊಬ್ಬರು ಬಿದ್ದು ಗಾಯಗೊಂಡಿರುವ ಕುರಿತು ಈಟಿವಿ ಭಾರತ ವರದಿ ಪ್ರಕಟಿಸಿ ಅಧಿಕಾರಿಗಳ ಗಮನಸೆಳೆದಿತ್ತು.