ವಿಜಯಪುರ:ಈರುಳ್ಳಿ ಬೆಲೆ ಕುಸಿತದ ಕಾರಣ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರು ಈರುಳ್ಳಿ ತೂರಾಡಿ ದಲ್ಲಾಳಿಗಳ ವಿರುದ್ಧ ಕಿಡಿಕಾರಿದರು.
ಈರುಳ್ಳಿ ಬೆಲೆ ದಿಢೀರ್ ಕುಸಿತ: ವಿಜಯಪುರದಲ್ಲಿ ರೈತರ ಆಕ್ರೋಶ - ವಿಜಯಪುರದಲ್ಲಿ ರೈತರ ಆಕ್ರೋಶ
ಈರುಳ್ಳಿ ಬೆಲೆ ದಿಢೀರ್ ಕುಸಿತದ ಕಾರಣ ವಿಜಯಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರು ಈರುಳ್ಳಿ ತೂರಾಡಿ ದಲ್ಲಾಳಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈರುಳ್ಳಿ ಬೆಲೆ ಕುಸಿತ:ವಿಜಯಪುರದಲ್ಲಿ ರೈತರ ಆಕ್ರೋಶ
ನಗರದ ಎಪಿಎಂಸಿ ಈರುಳ್ಳಿ ಮಾರುಕಟ್ಟೆಗೆ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ಅನೇಕ ಭಾಗಗಳಿಂದ ರೈತರು ಈರುಳ್ಳಿ ಮಾರಾಟ ಮಾಡಲು ಬಂದಿದ್ರು. ದಿಢೀರ್ ಈರುಳ್ಳಿ ಬೆಲೆ ಕುಸಿದ ಪರಿಣಾಮ ದಲ್ಲಾಳಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಭಾನುವಾರ ವಿಜಯಪುರ ಎಪಿಎಂಸಿ ಮಾರುಕಟ್ಟೆ ಪ್ರತಿ ಕ್ವಿಂಟಲ್‌ಗೆ 20 ಸಾವಿರ ಗಡಿ ದಾಟಿ ಮಾರಾಟವಾಗಿತ್ತು. ಆದ್ರೆ ಇಂದು 3 ಸಾವಿರಕ್ಕಿಂತ ಕಡಿಮೆ ಬೆಲೆಗೆ ಈರುಳ್ಳಿಯನ್ನು ರೈತರಿಂದ ದಲ್ಲಾಳಿಗಳು ಕೇಳಿದ್ದಕ್ಕಾಗಿ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರು ಗೊಂದಲಕ್ಕೀಡಾಗಿ ಮಾತಿನ ಚಕಮಕಿ ನಡೆಸಿದ್ರು.