ವಿಜಯಪುರ: ಜಿಲ್ಲೆಯಲ್ಲಿಂದು ಓರ್ವ ಬಾಲಕನಲ್ಲಿ ಕೊರೊನಾ ಸೋಂಕು ಕಾಣಿಸಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 229ಕ್ಕೆ ಏರಿಕೆಯಾಗಿದೆ.
ಮೂರು ವರ್ಷದ ಬಾಲಕನಿಗೆ ಸೋಂಕು.. ವಿಜಯಪುರದಲ್ಲಿ ಒಟ್ಟು 162 ಮಂದಿ ಡಿಸ್ಚಾರ್ಜ್ - ವಿಜಯಪುರ ಲೆಟೆಸ್ಟ್ ನ್ಯೂಸ್
ಸೋಂಕು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 10 ಜನರು ಗುಣಮುಖರಾಗಿ ಇಂದು ಮನೆಗೆ ಮರಳಿದ್ದಾರೆ.
![ಮೂರು ವರ್ಷದ ಬಾಲಕನಿಗೆ ಸೋಂಕು.. ವಿಜಯಪುರದಲ್ಲಿ ಒಟ್ಟು 162 ಮಂದಿ ಡಿಸ್ಚಾರ್ಜ್ Gina corona news](https://etvbharatimages.akamaized.net/etvbharat/prod-images/768-512-06:43-kn-vjp-04-one-ve-av-7202140-14062020184244-1406f-1592140364-752.jpg)
Gina corona news
P-6826 ಮೂರು ವರ್ಷದ ಬಾಲಕನಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ವಿಜಯಪುರ ಕಂಟೇನ್ಮೆಂಟ್ ಏರಿಯಾದಿಂದ ಬಾಲಕನಿಗೆ ಸೋಂಕು ತಗುಲಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಸದ್ಯ ಬಾಲಕನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
10 ಜನ ಗುಣಮುಖ: ಸೋಂಕು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 10 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈವರೆಗೆ ಒಟ್ಟು 162 ಜನ ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇನ್ನೂ 61 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.