ವಿಜಯಪುರ:ಜಲ್ಲಿಕಲ್ಲು ಹಾಗೂ ಕ್ರಷರ್ ಘಟಕದಲ್ಲಿ ಸ್ಫೋಟ ಸಂಭವಿಸಿದ್ದು ಕಲ್ಲು ಸಿಡಿದು ರಸ್ತೆ ಪಕ್ಕದಲ್ಲಿ ನಿಂತಿದ್ದ ಮೂವರು ಗಾಯಗೊಂಡಿದು, ಓರ್ವ ಆಸ್ಪತ್ರೆಯಲ್ಲಿ ಅಸುನೀಗಿದ ಘಟನೆ ವಿಜಯಪುರ ತಾಲೂಕಿನ ಅಲಿಯಾಬಾದ್‌ನಲ್ಲಿ ನಡೆದಿದೆ.
ವಿಜಯಪುರದ ಜಲ್ಲಿಕಲ್ಲು, ಕ್ರಷರ್ ಘಟಕದಲ್ಲಿ ಭೀಕರ ಸ್ಫೋಟ: ರಸ್ತೆ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿ ಸಾವು - ಕ್ರಷರ್ ಘಟಕದಲ್ಲಿ ಬ್ಲಾಸ್ಟ್
ವಿಜಯಪುರ ತಾಲೂಕಿನ ಅಲಿಯಾಬಾದ್ ಕಲ್ಲು ಕ್ರಷರ್ ಘಟಕದ ಬಳಿ ಸ್ಫೋಟ ಸಂಭವಿಸಿದೆ. ಈ ವೇಳೆ ರಸ್ತೆ ಪಕ್ಕದಲ್ಲಿ ನಿಂತದ್ದ ವ್ಯಕ್ತಿಗೆ ಕಲ್ಲು ತಗುಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಜಲ್ಲಿಕಲ್ಲು, ಕ್ರಷರ್ ಘಟಕದಲ್ಲಿ ಬ್ಲಾಸ್ಟ್
ಸಾವಳಗಿ ಕಲ್ಲು ಕ್ರಷರ್ ಘಟಕದಲ್ಲಿನ ಕಲ್ಲಿನ ಗಣಿಯಲ್ಲಿ ದುರಂತ ಸಂಭವಿಸಿದೆ. ದುರ್ಘಟನೆಯಲ್ಲಿ ಮೋಹನ್ ನಾಯ್ಕ್ (45) ಎಂಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ಇನ್ನಿಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗುತ್ತಿದೆ.
ಘಟನೆ ಬಳಿಕ ಸಾವಳಗಿ ಕ್ರಷರ್ ಘಟಕದಲ್ಲಿದ್ದವರು ಪರಾರಿಯಾಗಿದ್ದಾರೆ. ಇತ್ತ ಮೃತ ವ್ಯಕ್ತಿಯ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಅವರು ಕ್ರಷರ್ ಘಟಕದ ಮಾಲೀಕರ ಮೇಲೆ ಸೂಕ್ತ ಕ್ರಮಕ್ಕೆ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.