ವಿಜಯಪುರ: ಟ್ರಾನ್ಸ್‌ಫಾರ್ಮರ್ ಅಳವಡಿಸುವ ಸಂದರ್ಭ ವಿದ್ಯುತ್ ಹರಿದು ಕಾರ್ಮಿಕನೋರ್ವ ಸಾವಿಗೀಡಾದ ಘಟನೆ ಇಂಡಿ ತಾಲೂಕಿನ ಚೌಡಿಹಾಳ ಗ್ರಾಮದಲ್ಲಿ ನಡೆದಿದೆ.
ಗಂಗಾರಾಮ್ ಜೇವೂರು (35) ಮೃತ ವ್ಯಕ್ತಿ. ಸಾವನ್ನಪ್ಪಿದ ವ್ಯಕ್ತಿ ಲೈನ್‌ಮನ್ ಜೊತೆಗೆ ಕೆಲಸ ಮಾಡುತ್ತಿದ್ದ ಕಾರ್ಮಿಕ ಎಂದು ತಿಳಿದು ಬಂದಿದೆ. ಬಸು ಕೆಂಗನಾಳ್ ಹೆಸ್ಕಾಂ ಇಲಾಖೆಯಿಂದ ನೇಮಕವಾದ ಅಧಿಕೃತ ಲೈನ್‌ಮನ್ ಕೈಕೆಳಗೆ ಮೃತ ಗಂಗಾರಾಮ್ ಕೆಲಸ ಮಾಡುತ್ತಿದ್ದ ಎನ್ನಲಾಗುತ್ತಿದೆ.