ಕರ್ನಾಟಕ

karnataka

ETV Bharat / state

ಎನ್​​ಟಿಪಿಸಿ ನೌಕರನಲ್ಲಿ ಕೊರೊನಾ ಸೋಂಕು ದೃಢ: ಜಿಲ್ಲಾಧಿಕಾರಿ ಮಾಹಿತಿ - Vijayapura corona updates

ಎನ್​​ಟಿಪಿಸಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಕೊರೊನಾ ದೃಢಪಟ್ಟಿದೆ. ಸೋಂಕಿತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

YS Patila
YS Patila

By

Published : Jun 25, 2020, 9:13 PM IST

ವಿಜಯಪುರ:ಎನ್​​ಟಿಪಿಸಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 57 ವರ್ಷದ ವ್ಯಕ್ತಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು.

ಈ ವ್ಯಕ್ತಿ ಉತ್ತರಪ್ರದೇಶದ ಗಾಜಿಯಾಬಾದ್​​ನಿಂದ ಜೂನ್ 12ರಂದು ಜಿಲ್ಲೆಗೆ ಆಗಮಿಸಿದ್ದು, ಜೂನ್ 14ರಂದು ಹೋಮ್ ಕ್ವಾರಂಟೈನ್ ಮಾಡಲಾಗಿತ್ತು. ಈ ನಡುವೆ ವ್ಯಕ್ತಿಗೆ ಸೋಂಕಿನ‌ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಗಂಟಲು ದ್ರವವನ್ನು ಪರೀಕ್ಷೆಗೊಳಪಡಿಸಲಾಗಿತ್ತು. ವರದಿಯಲ್ಲಿ ಪಾಸಿಟಿವ್ ಬಂದಿದೆ ಎಂದರು.

ಸೋಂಕಿತ ವ್ಯಕ್ತಿಗೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಸೀಲ್‌ ಡೌನ್‌ಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ABOUT THE AUTHOR

...view details