ಕರ್ನಾಟಕ

karnataka

ETV Bharat / state

ಮುದ್ದೇಬಿಹಾಳ: ಅಕ್ಷರ ಕಲಿಸಿದ ಗುರುಗಳಿಗೆ ಶಿಷ್ಯರಿಂದ ಪಾದಪೂಜೆ

ಎಪಿಎಂಸಿ ಆವರಣದಲ್ಲಿರುವ ಕರ್ನಾಟಕ ಅರ್ಬನ್ ಬ್ಯಾಂಕ್ ಸಭಾಭವನದಲ್ಲಿ ವಿಬಿಸಿ ಪ್ರೌಢಶಾಲೆಯ 1984-85ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ಸ್ನೇಹಸಾಗರ ಗೆಳೆಯರ ಬಳಗ ನಿವೃತ್ತ ಶಿಕ್ಷಕರಿಗೆ ಗುರುವಂದನಾ ಕಾರ್ಯಕ್ರಮ ಏರ್ಪಡಿಸಿತ್ತು.

old students Program organizing
ಅಕ್ಷರ ಕಲಿಸಿದ ಗುರುಗಳಿಗೆ ಶಿಷ್ಯರಿಂದ ಪಾದಪೂಜೆ, ಗುರುವಂದನೆ

By

Published : Jan 17, 2021, 6:29 PM IST

ಮುದ್ದೇಬಿಹಾಳ: ತಮ್ಮ ಜೀವನದಲ್ಲಿ ಅಕ್ಷರ ಕಲಿಸಿ ಅನ್ನದ ದಾರಿ ಹೇಳಿಕೊಟ್ಟ ಗುರುಗಳಿಗೆ ಶಿಷ್ಯಂದಿರು ಗುರುವಂದನೆ ಕಾರ್ಯಕ್ರಮದಲ್ಲಿ ಪಾದಪೂಜೆ ಮಾಡುವ ಮೂಲಕ ಕೃತಜ್ಞತೆ ಸಮರ್ಪಿಸಿದರು.

ಅಕ್ಷರ ಕಲಿಸಿದ ಗುರುಗಳಿಗೆ ಶಿಷ್ಯರಿಂದ ಪಾದಪೂಜೆ, ಗುರುವಂದನೆ

ಇದನ್ನೂ ಓದಿ: ದಿ. ಸುರೇಶ್​​ ಅಂಗಡಿ ಮನೆಗೆ ಅಮಿತ್ ಶಾ ಭೇಟಿ; ಕುಟುಂಬ ವರ್ಗದವರಿಗೆ ಸಾಂತ್ವನ

ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ಹಿರಿಯ ಶಿಕ್ಷಕರ ಪಾದಪೂಜೆ ಮಾಡಿ ಹೂಚೆಲ್ಲಿ ನಮಸ್ಕರಿಸಿ, ವೇದಿಕೆಗೆ ಕರೆತಂದಿದ್ದು ವಿಶೇಷವಾಗಿತ್ತು.

ಗುರುವಂದನೆ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಎಸ್.ಬಿ.ಕನ್ನೂರ, ಇದು ಶರಣರ ನೆಲವಾಗಿದ್ದರಿಂದಲೇ ಇಂತಹ ಶಿಕ್ಷಕರನ್ನು ಸ್ಮರಿಸುವ ಕಾರ್ಯಕ್ರಮಗಳು ಜರುಗುತ್ತಿವೆ. ನಿವೃತ್ತಿ ಜೀವನ ನಡೆಸುತ್ತಿರುವ ಹಿರಿಯ ಜೀವಗಳಿಗೆಲ್ಲ ಈಗ ಬೇಕಿರುವುದು ಪ್ರೀತಿ, ಮಮತೆ ಹಾಗೂ ಕಾಳಜಿ ತುಂಬಿದ ಹೃದಯಗಳು. ಅಂತಹ ಹೃದಯಗಳು ನಮ್ಮ ಶಿಷ್ಯಂದಿರ ರೂಪದಲ್ಲಿ ಸಿಕ್ಕಿರುವುದು ನಮ್ಮ ಭಾಗ್ಯ ಎಂದರು.

ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರ ಆಪ್ತಸಹಾಯಕ ಸಂಜಯ ಬೆಟಗೇರಿ ಮಾತನಾಡಿ, ನನ್ನ ತಂದೆ ನಾನು ತಹಶೀಲ್ದಾರ್ ಆಗಬೇಕು ಎಂದು ಹೇಳುತ್ತಿದ್ದರು. ಆದರೆ ಗುರುಗಳ ಆಶೀರ್ವಾದ, ಮಾರ್ಗ ದರ್ಶನದಿಂದ ವಿಧಾನಸೌಧದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಆಪ್ತಸಹಾಯಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು.

ಇಟಗಿ ಮೇಲುಗದ್ದುಗೆ ಮಠದ ಗುರುಶಾಂತವೀರ ಶಿವಾಚಾರ್ಯರು ಮಾತನಾಡಿ, ಭಾರತ ಹಲವು ಸಂಸ್ಕೃತಿಯ ನಾಡಾಗಿದೆ. ಇಲ್ಲಿ ಶಿಕ್ಷಕರ ವೃತ್ತಿ ಪವಿತ್ರವಾದದು. ಅಂತಹ ಹಿರಿಯ ಶಿಕ್ಷಕರನ್ನು ಗುರುತಿಸಿ ಗೌರವಿಸುತ್ತಿರುವುದು ಒಳ್ಳೆಯ ಕಾರ್ಯ. ಆರ್ಥಿಕವಾಗಿ ಹಿಂದುಳಿದು ಆರೋಗ್ಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಶಿಕ್ಷಕರ ನೆರವಿಗೆ ಇಂತಹ ಸ್ನೇಹ ಬಳಗಗಳು ಮುಂದಾಗಬೇಕು ಎಂದು ತಿಳಿಸಿದರು.

ABOUT THE AUTHOR

...view details