ವಿಜಯಪುರ:ಪೋಸ್ಟ್ಮನ್ಗಳು ಸರಿಯಾಗಿ ಮಾಸಿಕ ಪಿಂಚಣಿ ಹಣ ನೀಡುತ್ತಿಲ್ಲ ಎಂದು ಆರೋಪಿಸಿ ಪಿಂಚಣಿ ಫಲಾನುಭವಿಗಳು ಜಿಲ್ಲಾಧಿಕಾರಿ ಮನವಿ ಸಲ್ಲಿಸಿದ್ದಾರೆ.
ಬಡ ಮಹಿಳೆಯರ ಪಿಂಚಣಿ ಹಣ ಪೋಸ್ಟ್ ಮನ್ಗಳ ಜೇಬಿಗೆ: ಫಲಾನುಭವಿಗಳ ಆರೋಪ - ಪೋಸ್ಟ್ಮನ್ಗಳ ವಿರುದ್ಧ ಆರೋಪ
ವಯೋವೃದ್ಧರಿಗೆ ಸರ್ಕಾರ ಮಾಸಿಕವಾಗಿ ನೀಡುವ ಪಿಂಚಣಿ ಹಣವನ್ನು ಸರಿಯಾಗಿ ತಲುಪಿಸದೇ ಪೋಸ್ಟ್ಮ್ಯಾನ್ಗಳು ಪಿಂಚಣಿದಾರರ ಹಣವನ್ನು ಲಪಟಯಿಸುತ್ತಿದ್ದಾರೆ ಎಂಬ ಆರೋಪ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯಲ್ಲಿ ಕೇಳಿ ಬಂದಿದೆ.
![ಬಡ ಮಹಿಳೆಯರ ಪಿಂಚಣಿ ಹಣ ಪೋಸ್ಟ್ ಮನ್ಗಳ ಜೇಬಿಗೆ: ಫಲಾನುಭವಿಗಳ ಆರೋಪ old pension issue in vijaypur](https://etvbharatimages.akamaized.net/etvbharat/prod-images/768-512-8537755-565-8537755-1598263791281.jpg)
ಜಿಲ್ಲೆಯ ದೇವರಹಿಪ್ಪರಗಿಯಲ್ಲಿ ಪೋಸ್ಟ್ಮನ್ಗಳು ಬಡವರ ಹಣಕ್ಕೆ ಕಣ್ಣು ಹಾಕುತ್ತಿದ್ದು, ಕಳೆದ ಹಲವು ತಿಂಗಳ ಹಿಂದೆಯೇ ಸರ್ಕಾರ ಪಿಂಚಣಿ ಹಣ ಪಾವತಿ ಮಾಡಿದ್ದರೂ, ಅದನ್ನು ಜನರಿಗೆ ತಲುಪಿಸದೆ ಆ ಹಣವನ್ನು ತಮ್ಮ ಜೇಬಿಗೆ ಹಾಕಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ. 11 ತಿಂಗಳ ಪಿಂಚಣಿ ಹಣ ಬರಬೇಕಾಗಿತ್ತು, ಆದ್ರೆ ಪೋಸ್ಟ್ಮನ್ಗಳು 4 ತಿಂಗಳ ಹಣ ಮಾತ್ರ ನೀಡಿದ್ದಾರೆ. ಈ ಬಗ್ಗೆ ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪಿಂಚಣಿದಾರರು ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿದ್ರು.
ಇನ್ನೂ ಪಾಸ್‌ಬುಕ್ ನೀಡುತ್ತೇವೆ ಎಂದು ಹೇಳಿ ಬಡವರಿದಿಂದ ಹಣ ಪಡೆದಿದ್ದು, ಇದುವರಿಗೂ ಬ್ಯಾಂಕ್ ಪಾಸ್‌ಬುಕ್ ನೀಡಿಲ್ಲ. ಇತ್ತ ಪಿಂಚಣಿ ಹಣವನ್ನೂ ನೀಡುತ್ತಿಲ್ಲ, ಹೀಗಾಗಿ ಜಿಲ್ಲಾಧಿಕಾರಿಗಳು ಪರಿಶೀಲನೆ ನಡಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗುವಂತೆ ವಯೋವೃದ್ಧರು ಮನವಿ ಸಲ್ಲಿಸಿದ್ರು.