ಯಾದಗಿರಿ:ಮನೆಯೊಳಗೆ ನುಗ್ಗುತ್ತಿದ್ದ ಹಾವನ್ನು ಹಿಡಿದ ವೃದ್ಧನೋರ್ವ ಅದೇ ಹಾವಿನಿಂದ ಕಚ್ಚಿಸಿಕೊಂಡು ಮೃತಪಟ್ಟಿರುವ ಘಟನೆ ವಡಗೇರಾ ತಾಲೂಕಿನ ಗೋಡಿಹಾಳ ಗ್ರಾಮದಲ್ಲಿ ನಡೆದಿದೆ.
ಬಸವರಾಜ ಪೂಜಾರಿ ಮೃತ ವ್ಯಕ್ತಿ. ಕೈಯಲ್ಲಿ ಹಾವನ್ನು ಹಿಡಿದುಕೊಂಡೇ ಸಾವುನ್ನಪ್ಪಿದ್ದಾನೆ. ಈ ಹಿಂದೆ ಕೂಡಾ ಹಾವು ಹಿಡಿದು ದೂರ ಬಿಟ್ಟು ಬರುತ್ತಿದ್ದ ವೃದ್ಧ ಇಂದು ಕೂಡಾ ಮನೆಗೆ ಬಂದಿದ್ದ ಹಾವನ್ನು ಹಿಡಿದಿದ್ದಾನೆ. ಹಿಡಿದಿರುವ ಹಾವು 5ಕ್ಕೂ ಹೆಚ್ಚು ಬಾರಿ ಕಚ್ಚಿದ್ದು, ನೋವು ತಾಳದೆ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.