ವಿಜಯಪುರ:ಸರ್ವಜ್ಞ ಜಯಂತಿಗೆ ಅಧಿಕಾರಿಗಳು ಬಾರದ ಕಾರಣ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆದಿದೆ.
ಸರ್ವಜ್ಞ ಜಯಂತಿಗೆ ಬಾರದ ಅಧಿಕಾರಿಗಳು: ಸಾರ್ವಜನಿಕರು ಆಕ್ರೋಶ - ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರ
ಸರ್ವಜ್ಞ ಜಯಂತಿಗೆ ಅಧಿಕಾರಿಗಳು ಬಾರದ ಹಿನ್ನೆಲೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ, ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆಯಿತು.
![ಸರ್ವಜ್ಞ ಜಯಂತಿಗೆ ಬಾರದ ಅಧಿಕಾರಿಗಳು: ಸಾರ್ವಜನಿಕರು ಆಕ್ರೋಶ Sarvajna Jayanthi](https://etvbharatimages.akamaized.net/etvbharat/prod-images/768-512-6136228-thumbnail-3x2-vjp.jpg)
ಸರ್ವಜ್ಞ ಜಯಂತಿಗೆ ಬಾರದ ಅಧಿಕಾರಿಗಳು
ಸರ್ವಜ್ಞ ಜಯಂತಿಗೆ ಬಾರದ ಅಧಿಕಾರಿಗಳು
ಜಿಲ್ಲಾಡಳಿತದಿಂದ 10 ಗಂಟೆಗೆ ಕಾರ್ಯಕ್ರಮ ನಿಗದಿ ಪಡಿಸಲಾಗಿತ್ತು. 11.30 ಆದ್ರೋ ಯಾವ ಅಧಿಕಾರಿಗಳು ಕಾರ್ಯಕ್ರಮಕ್ಕೆ ಬಾರಲಿಲ್ಲ. ಜಿಲ್ಲಾಧಿಕಾರಿ ಕಾರ್ಯಕ್ರಮಕ್ಕೆ ಬಾರದಿರೋದಕ್ಕೆ ಕೆಲ ಕಾಲ ವಾಗ್ವಾದ ಆರಂಭವಾಗಿತ್ತು.
ಕಾರ್ಯಕ್ರಮಕ್ಕೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಕಾದುಕುಳಿತುಕೊಳ್ಳುವಂತಾಗಿತ್ತು. ವೇದಿಕೆಯ ಎಲ್ಲ ಕುರ್ಚಿಗಳು ಖಾಲಿ ಖಾಲಿಯಾಗಿ ಉಳಿದ ಕಾರಣ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.