ಕರ್ನಾಟಕ

karnataka

ETV Bharat / state

ಮುದ್ದೇಬಿಹಾಳ: ಕಲ್ಪವೃಕ್ಷಕ್ಕೆ ಸೀಮಂತ ಕಾರ್ಯ ಮಾಡಿದ ಅಧಿಕಾರಿಗಳು - seemantha karya to coconut tree

ಅಲ್ಲಿ ಹಬ್ಬದ ಸಡಗರ, ಸಂಭ್ರಮ ಮೇಳೈಸಿತ್ತು. ಪೂಜೆ ಪುನಸ್ಕಾರಗಳ ಸಾನಿಧ್ಯವಿತ್ತು. ಘಮಘಮಿಸುವ ಊಟೋಪಚಾರಗಳ ಆತಿಥ್ಯವಿತ್ತು. ಇದೆಲ್ಲ ನಡೆದಿದ್ದು ಯಾವುದೋ ಮದುವೆ ಮನೆಯಲಲ್ಲ, ಬದಲಾಗಿ ಮುದ್ದೇಬಿಹಾಳ ಕ್ಷೇತ್ರದ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಮುಂಭಾಗದಲ್ಲಿ. ಕಚೇರಿ ಮುಂಭಾಗದಲ್ಲಿ ಬೆಳೆಸಲಾಗಿದ್ದ ತೆಂಗಿನಮರಕ್ಕೆ ಇಂದು ಸೀಮಂತ ಕಾರ್ಯ ಮಾಡಲಾಯಿತು.

ಕಲ್ಪವೃಕ್ಷಕ್ಕೆ ಸೀಮಂತ ಕಾರ್ಯ ಮಾಡಿದ ಅಧಿಕಾರಿಗಳು
ಕಲ್ಪವೃಕ್ಷಕ್ಕೆ ಸೀಮಂತ ಕಾರ್ಯ ಮಾಡಿದ ಅಧಿಕಾರಿಗಳು

By

Published : Dec 2, 2020, 2:36 PM IST

Updated : Dec 2, 2020, 4:02 PM IST

ಮುದ್ದೇಬಿಹಾಳ (ವಿಜಯಪುರ): ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿದ್ದ ಶ್ರೀ ಹೆಚ್​.ಬಿ. ಪಾಟೀಲ್​ 2013-14ನೇ ಸಾಲಿನಲ್ಲಿ ಕಚೇರಿಯ ಆವರಣದಲ್ಲಿ ಒಂದು ತೆಂಗಿನ ಮರ ನೆಟ್ಟಿದ್ದರು. ಆಗಿನಿಂದ ಕಚೇರಿಯ ಡಿ - ದರ್ಜೆಯ ನೌಕರರಾದ ಬಿ.ವೈ. ಸಿಂದಗಿ ಇತರರು ಗಿಡಮರಗಳನ್ನು ಬೆಳೆಸುತ್ತಾ, ವಿಷೇಷ ಅಕ್ಕರೆಯಿಂದ ತೆಂಗಿನ ಮರವನ್ನು ನೀರೆರೆದು ಪೋಷಿಸುತ್ತಾ ಬಂದಿದ್ದರು. ಈ ವರ್ಷ ಈ ತೆಂಗಿನ ಮರವು ಮೊದಲ ಬಾರಿಗೆ ಸಮೃದ್ದವಾದ ಫಲಗಳನ್ನು ಬಿಟ್ಟಿದೆ.

ಕಲ್ಪವೃಕ್ಷಕ್ಕೆ ಸೀಮಂತ ಕಾರ್ಯ ಮಾಡಿದ ಅಧಿಕಾರಿಗಳು

ತೆಂಗಿನಮರ ಮೊದಲ ಬಾರಿಗೆ ಫಲ ಬಿಟ್ಟಿದ್ದರಿಂದ ಅಧಿಕಾರಿ ವರ್ಗದವರು ಕಚೇರಿ ಮಗಳ ಚೊಚ್ಚಲ ಹೆರಿಗೆ ಎಂದೇ ಭಾವಿಸಿ, ಸಂಪ್ರದಾಯದಂತೆ ತೆಂಗಿನ ಮರಕ್ಕೆ ಸೀಮಂತ ಕಾರ್ಯಕ್ರಮ ನೆರವೇರಿಸಲು ಸನ್ನದ್ಧರಾದರು. ಕಾಕತಾಳೀಯ ಎಂಬಂತೆ ನಲಿ-ಕಲಿ ಇಂಗ್ಲಿಷ್​​​ ತರಬೇತಿ ನಡೆಯುತ್ತಿದ್ದ ವೇಳೆ, ಈ ವಿಷಯವನ್ನು ಶಿಕ್ಷಕರ ಮುಂದೆ ಪ್ರಸ್ತಾಪಿಸಲಾಗಿತ್ತು. ಆಗ ಮಹಿಳಾ ಶಿಕ್ಷಕರು ಸಂಪನ್ಮೂಲ ಶಿಕ್ಷಕಿಯರಾದ ಸರೋಜಾ ಕೋರಿ ನೇತೃತ್ವದಲ್ಲಿ ಅತ್ಯುತ್ಸಾಹದಿಂದ ಈ ಕಾರ್ಯ ನೆರವೇರಿಸಲು ಸನ್ನದ್ದರಾಗಿ ಇಂದು ಸಂಭ್ರಮದಿಂದ ತೆಂಗಿನ ಗಿಡಕ್ಕೆ ಸೀಮಂತ ಕಾರ್ಯಕ್ರಮ ನೆರವೇರಿಸಲಾಯಿತು.

ಅಲ್ಲಿ ಸಂಪ್ರದಾಯವಿತ್ತು, ಸಂಪ್ರದಾಯ ಪದಗಳ ಝೇಂಕಾರವಿತ್ತು. ಪರಸ್ಪರ ಗಂಡು ಹೆಣ್ಣಿನ ಕಡೆಯವರು ಮರಕ್ಕೆ ಆರತಿ ಮಾಡಿ, ಮಹಿಳೆಯರಿಗೆ ಉಡಿ ತುಂಬಿದರು. ಒಡಪಿಟ್ಟು ದಂಪತಿಗಳ ಹೆಸರು ಹೇಳಿದರು. ಹೋಳಿಗೆ ಊಟ ಮಾಡಿದರು. ಒಟ್ಟಾಗಿ ಸಂಭ್ರಮಿಸಿ, ಪರಿಸರಕ್ಕೆ ದೈವತ್ವದ ಕಳೆ ನೀಡಿದರು.

Last Updated : Dec 2, 2020, 4:02 PM IST

ABOUT THE AUTHOR

...view details