ವಿಜಯಪುರ:ಜೆಸಿಬಿ ಯಂತ್ರ ಬಡಿದು ಕೂಡಗಿ ಎನ್ಟಿಪಿಸಿಯಲ್ಲಿ ಕರ್ತವ್ಯನಿರತ ಕಾರ್ಮಿಕನ ಸಾವು ಪ್ರಕರಣಕ್ಕೆ ನ್ಯಾಯ ಒದಗಿಸಬೇಕೆಂದು ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಎನ್ಟಿಪಿಸಿಯಲ್ಲಿ ಕಾರ್ಮಿಕನ ಸಾವು ಪ್ರಕರಣ: ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ - ಎನ್ಟಿಪಿಸಿಯಲ್ಲಿ ಕರ್ತವ್ಯನಿರತ ಕಾರ್ಮಿಕ ಸಾವು ಪ್ರಕರಣ
ಜೆಸಿಬಿ ಯಂತ್ರ ಬಡಿದು ಕೂಡಗಿ ಎನ್ಟಿಪಿಸಿಯಲ್ಲಿ ಕರ್ತವ್ಯನಿರತ ಕಾರ್ಮಿಕ ಸಾವನ್ನಪ್ಪಿದ್ದು, ಆತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.

NTPC worker protested in Vijayapura
ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರ ಪ್ರತಿಭಟನೆ
ನಿಡಗುಂದಿ ತಾಲೂಕಿನ ಎನ್ಟಿಪಿಸಿಯಲ್ಲಿ (ಕೂಡಗಿ ಉಷ್ಣ ವಿದ್ಯುತ್ ಸ್ಥಾವರ) ಕೆಲಸ ಮುಗಿಸಿ ವಾಪಸ್ ಮನೆಗೆ ಬರುವ ವೇಳೆ ಎನ್ಟಿಪಿಸಿ ಆವರಣದಲ್ಲಿ ಜೆಸಿಬಿ ಬಡಿದು ರಮೇಶ ಉಳ್ಳಾಗಡ್ಡಿ ಎಂಬ ಕಾರ್ಮಿಕ ಮೃತಪಟ್ಟಿದ್ದರು. ಈ ಕುರಿತಂತೆ ಕೂಡಗಿ ಎನ್ಟಿಪಿಸಿ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ಪ್ರತಿಭಟನೆ ನಡೆಸಿದ ಕಾರ್ಮಿಕ ಸಂಘದ ಕಾರ್ಯಕರ್ತರು ಮೃತ ಕಾರ್ಮಿಕನ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ಆಗ್ರಹಿಸಿದರು.