ಕರ್ನಾಟಕ

karnataka

ETV Bharat / state

ರಾಜ್ಯಸಭಾ ಚುನಾವಣೆ ನಂತರ ಮೌನಕ್ಕೆ ಜಾರಿದ ಯತ್ನಾಳ - no reaction from minister basanagouda yatnal patil

ವಿಜಯಪುರ ಸಂಗನ ಬಸವ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸದೆ, ನಾನು ಏನೂ ಮಾತನಾಡುವುದಿಲ್ಲ ಎಂದು ಹೇಳಿ ತೆರಳಿದ್ದಾರೆ.

no-reaction-from-minister-basanagouda-yatnal-patil
ರಾಜ್ಯಸಭಾ ಚುನಾವಣೆ ನಂತರ ಮೌನಕ್ಕೆ ಜಾರಿದ ಯತ್ನಾಳ

By

Published : Jun 12, 2022, 6:08 PM IST

ವಿಜಯಪುರ : ಸದಾ ತಮ್ಮ ಮಾತಿನ ಮೂಲಕ ಸ್ವ ಪಕ್ಷೀಯ ನಾಯಕರನ್ನು ಮುಜುಗರಕ್ಕೀಡು ಮಾಡುತ್ತಿದ್ದ ಬಿಜೆಪಿಯ ಫೈರ್ ಬ್ರಾಂಡ್ ಶಾಸಕ ಬಸನಗೌಡ ಪಾಟೀಲ ಯತ್ನಾಳ ಏಕಾಏಕಿ ಮೌನಕ್ಕೆ ಜಾರಿದ್ದಾರೆ.

ನಗರದ ಸಂಗನಬಸವ ಕಾರ್ಯಾಲಯದಲ್ಲಿ ನಡೆದ, ಸಿದ್ಧಸಿರಿ ಬ್ಯಾಂಕಿನ 16ನೇ ಸರ್ವ ಸದಸ್ಯರ ಸಾಮಾನ್ಯ ಸಭೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಕಾರಿನಿಂದ ಇಳಿದ ಅವರನ್ನು ಮಾಧ್ಯಮದವರು ನಾಳೆ ನಡೆಯಲಿರುವ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದ ಚುನಾವಣೆ ಕುರಿತು ಪ್ರಶ್ನಿಸಿದ್ದು, ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದ ಶಾಸಕ, ನಾನು‌ ಏನು ಮಾತನಾಡುವುದಿಲ್ಲ ಎಂದು ಹೇಳಿ ಕಾರ್ಯಕ್ರಮಕ್ಕೆ ತೆರಳಿದ್ದಾರೆ.

ವಾಯವ್ಯ ಕ್ಷೇತ್ರದ ಚುನಾವಣೆಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವ ಮುರುಗೇಶ ನಿರಾಣಿ ಸೇರಿ ಹಲವು ನಾಯಕರು ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಆಗಮಿಸಿದ್ದರೂ, ಅವರ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವ ಯತ್ನಾಳ ಅವರಿಂದ ಅಂತರ ಕಾಯ್ದುಕೊಂಡಿದ್ದರು. ಯಾವುದೇ ಪ್ರಚಾರದ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಇದರ ಜತೆ ಮೊನ್ನೆ ನಡೆದ ರಾಜ್ಯಸಭಾ ಚುನಾವಣೆ ಬಗ್ಗೆಯೂ ಪ್ರತಿಕ್ರಿಯಿಸಲು ನಿರಾಕರಿಸಿದರು. ವಾಯವ್ಯ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಪ್ರಚಾರದಿಂದ ಯತ್ನಾಳ ದೂರ ಉಳಿದಿದ್ದರು.

ಓದಿ :ತಾಯಿಗೆ ಬರ್ತ್​ಡೇ ವಿಶ್​ ತಿಳಿಸಲು ಮೊಬೈಲ್‌ ಕೊಡಲಿಲ್ಲವೆಂದು ನೊಂದ ವಿದ್ಯಾರ್ಥಿ ಆತ್ಮಹತ್ಯೆ!

For All Latest Updates

TAGGED:

ABOUT THE AUTHOR

...view details