ಕರ್ನಾಟಕ

karnataka

ETV Bharat / state

ವಿಜಯಪುರ: ಒಳಚರಂಡಿ ಕಾಮಗಾರಿಗೆ ಪಾಲಿಕೆ ಬಳಿ ಹಣ ಇಲ್ಲವೇ? - vijayapura hyc

ಮಹಾನಗರ ಪಾಲಿಕೆಗೆ ಒಳಚರಂಡಿ ಕಾಮಗಾರಿ ಆರಂಭಿಸಿ ಎಂದು ಜನರ ಒತ್ತಾಯವಿದೆ. ಆದರೆ ಸದ್ಯ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ಸಿಬ್ಬಂದಿ ವೇತನಕ್ಕೂ ಪಾಲಿಕೆ ಹಣಕಾಸಿನ ತೊಂದರೆ ಅನುಭವಿಸುತ್ತಿದೆ ಎಂದು ಸಬೂಬು ಹೇಳುವ ಕೆಲಸ ನಡೆಯುತ್ತಿದೆ.

no proper underground drainage in vijayapura !
ವಿಜಯಪುರ: ಒಳಚರಂಡಿ ಕಾಮಗಾರಿಗೆ ಪಾಲಿಕೆ ಬಳಿ ಹಣ ಇಲ್ಲವೇ?

By

Published : Apr 21, 2021, 5:57 PM IST

ವಿಜಯಪುರ: ನಗರಗಳು ಬೆಳೆದಂತೆ ತ್ಯಾಜ್ಯ, ಕೊಳಚೆ ನೀರು ಕೂಡಾ ಹೆಚ್ಚು ಉತ್ಪತ್ತಿಯಾಗುತ್ತದೆ. ಇದರ ಸಾಗಣೆ, ಸಂಸ್ಕರಣೆಗೆ ಸೂಕ್ತ ವ್ಯವಸ್ಥೆ ಇರಬೇಕು. ಆದರೆ ಜಿಲ್ಲೆಯಲ್ಲಿ ಒಳಚರಂಡಿ ಕಾಮಗಾರಿ ಮಾತ್ರ ಹಲವು ವರ್ಷಗಳಿಂದ ನಿಂತು ಹೋಗಿದೆ.

ಮಹಾನಗರ ಪಾಲಿಕೆಗೆ ಒಳಚರಂಡಿ ಕಾಮಗಾರಿ ಆರಂಭಿಸಿ ಎಂದು ಜನರ ಒತ್ತಾಯವಿದೆ. ಆದರೆ, ಸದ್ಯ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ಸಿಬ್ಬಂದಿ ವೇತನಕ್ಕೂ ಪಾಲಿಕೆ ಹಣಕಾಸಿನ ತೊಂದರೆ ಅನುಭವಿಸುತ್ತಿದೆ ಎಂದು ಸಬೂಬು ಹೇಳುವ ಕೆಲಸ ನಡೆಯುತ್ತಿದೆ. ಇದರ ಜತೆ ಸಿಮೆಂಟ್ ರಸ್ತೆ ನಿರ್ಮಾಣ ಕಾಮಗಾರಿಯನ್ನು ಶಾಸಕರು ನಡೆಸುತ್ತಿರುವುದೂ ಕೂಡ ಒಂದು ಕಾರಣ.

ಒಳಚರಂಡಿ ವ್ಯವಸ್ಥೆ ಕುರಿತು ಪಾಲಿಕೆ ಆಯುಕ್ತರು ಏನಂತಾರೆ?

ಪ್ರವಾಸಿ ತಾಣ, ಐತಿಹಾಸಿಕ ಗೋಳ ಗುಮ್ಮಟ ಇರುವ ವಿಜಯಪುರ ನಗರದಲ್ಲಿ ಈಗ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗುತ್ತಿವೆ. ನಗರ ಶಾಸಕ ತಮ್ಮ ಅನುದಾನದಲ್ಲಿ ಎಲ್ಲ ಕಡೆ ಸಿಮೆಂಟ್ ರಸ್ತೆ ನಿರ್ಮಾಣ ಮಾಡುತ್ತಿದ್ದು, ಒಳಚರಂಡಿ ಅದರೊಳಗೆ ಹುದುಗಿ ಹೋಗುತ್ತಿವೆ. 2011-12ರಲ್ಲಿ ‌ನಗರದಲ್ಲಿ ಒಳಚರಂಡಿ‌ ಕಾಮಗಾರಿಗೆ 110 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿತ್ತು. ಆದರೆ, ಗುತ್ತಿಗೆದಾರರು ಕಾಮಗಾರಿ ಸ್ಥಗಿತಗೊಳಿಸಿದ್ದರು. ಇಂದಿಗೂ ಸೂಕ್ತ ಒಳಚರಂಡಿ ವಿಜಯಪುರ ಜನತೆಗೆ ಲಭ್ಯವಾಗಿಲ್ಲ.

ಇದನ್ನೂ ಓದಿ:ಬೆಳಗಾವಿಯ ಅರ್ಧ ಭಾಗದಲ್ಲಿಲ್ಲ ಯುಜಿಡಿ ಲೈನ್: ಒಳಚರಂಡಿ ನಿರ್ವಹಣೆಗೆ ಪಾಲಿಕೆ ಕಸರತ್ತು!

ಅಂದು ಪಾಲಿಕೆಗೆ 50 ಸಾವಿರ ವಾಣಿಜ್ಯ ಹಾಗೂ ವಾಣಿಜ್ಯ ರಹಿತರು ಕರ ತುಂಬುತ್ತಿದ್ದರು. ಸದ್ಯ 78 ಸಾವಿರ ಜನ ಕರ ತುಂಬುವರಾಗಿದ್ದಾರೆ. ಕಂಡ ಕಂಡಲ್ಲಿ ಹೊಸ ಬಡಾವಣೆ, ಲೇ ಔಟ್, ಅಪಾರ್ಟ್‌ಮೆಂಟ್ ಗಳು ತಲೆ ಎತ್ತುತ್ತಿವೆ. ಇವುಗಳಿಗೆ ಬಹುತೇಕರು ಜವಾಬ್ದಾರಿ ಹೊಂದಿರುತ್ತಾರೆ. ವಿಚಿತ್ರ ಎಂದರೆ ಮಹಾನಗರ ಪಾಲಿಕೆಯ ಕಚೇರಿ ಸುತ್ತ ಮುತ್ತವೇ ಒಳಚರಂಡಿ ಕಾಮಗಾರಿ ಅರ್ಧಕ್ಕೆ ನಿಂತಿದೆ. ಈಗ ಅದರ ಬಳಿ ಸಿಮೆಂಟ್ ರಸ್ತೆ ನಿರ್ಮಾಣವಾಗಿದೆ. ಮತ್ತೆ ಒಳಚರಂಡಿ ಕಾಮಗಾರಿ ಬಹುತೇಕ ಅನಾಥವಾಗಿದೆ. ಪಾಲಿಕೆ ಮುಂದಾಲೋಚನೆ ಮಾಡಿ ಸಿಮೆಂಟ್ ರಸ್ತೆ‌ ನಿರ್ಮಿಸಲಿ, ಸೂಕ್ತ ಒಳಚರಂಡಿಗಳೂ ಆಗಲಿ ಎನ್ನುವುದು ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ.

ABOUT THE AUTHOR

...view details