ಕರ್ನಾಟಕ

karnataka

ETV Bharat / state

ಮೂವರು ಶಿಕ್ಷಕರಿಗೆ ಮಾತ್ರ ಕೋವಿಡ್ ದೃಢ: ಆತಂಕ ಪಡುವ ಅವಶ್ಯಕತೆಯಿಲ್ಲ ಎಂದ ಡಿಡಿಪಿಐ - ವಿಜಯಪುರ ಡಿಡಿಪಿಐ ಪ್ರಸನ್ನಕುಮಾರ್

ವಿದ್ಯಾಗಮ ಯೋಜನೆಯಿಂದ ಯಾವುದೇ ತೊಂದರೆಯಾಗಿಲ್ಲ. ಕಳೆದ ಎರಡು ತಿಂಗಳ ಹಿಂದೆ ಮೂವರು ಶಿಕ್ಷಕರಿಗೆ ಮಾತ್ರ ಕೊರೊನಾ ತಗುಲಿತ್ತು. ಯಾರೂ ಭಯ ಪಡಬೇಕಾದ ಅವಶ್ಯಕತೆಯಿಲ್ಲ ಎಂದು ಡಿಡಿಪಿಐ ಪ್ರಸನ್ನಕುಮಾರ್ ತಿಳಿಸಿದ್ದಾರೆ.

ddpi reaction
ಮೂವರು ಶಿಕ್ಷಕರಿಗೆ ಕೋವಿಡ

By

Published : Oct 10, 2020, 7:14 PM IST

ವಿಜಯಪುರ: ಜಿಲ್ಲೆಯಲ್ಲಿ ಮೂವರು ಶಿಕ್ಷಕರಿಗೆ ಕೋವಿಡ್ ದೃಢಪಟ್ಟಿದೆ. ಉಳಿದ ಯಾವುದೇ ಶಿಕ್ಷಕರಿಗೆ ತೊಂದರೆಯಾಗಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪ್ರಸನ್ನಕುಮಾರ್ ತಿಳಿಸಿದ್ದಾರೆ.

ಈ ಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಎರಡು ತಿಂಗಳ ಹಿಂದೆ ಜಿಲ್ಲೆಯ ಮೂವರು ಶಿಕ್ಷಕರಿಗೆ ಕೋವಿಡ್ ತಗುಲಿತ್ತು. ಆದರೆ, ಅದು ಅವರ ಕೌಟುಂಬಿಕ ವಾತಾವರಣದಲ್ಲಿ ತಗುಲಿದೆ. ಶಾಲೆಗೆ ಬಂದಾಗ ಆಗಲಿ, ವಿದ್ಯಾಗಮ ಯೋಜನೆಯಲ್ಲಾಗಲಿ ಅವರಿಗೆ ವೈರಸ್ ತಗುಲಿಲ್ಲ. ಮುಖ್ಯವಾಗಿ ಆ ಮೂವರು ಶಿಕ್ಷಕರು ವಿದ್ಯಾಗಮ ಯೋಜನೆಯಲ್ಲಿ ಪಾಲ್ಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ನಮ್ಮ ಜಿಲ್ಲೆಯಲ್ಲಿ ನಡೆಯುತ್ತಿರುವ ವಿದ್ಯಾಗಮದಲ್ಲಿ ಯಾವುದೇ ರೀತಿಯ ತೊಂದರೆಯಾಗಿಲ್ಲ. ನೂರಕ್ಕೆ ನೂರರಷ್ಟು ವಿದ್ಯಾಗಮ ಯೋಜನೆ ಯಶಸ್ವಿಯಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಸಿದ್ದಲಿಂಗಯ್ಯ ಕನ್ನೂರ, ತಿಡಗುಂದಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಕ್ಕೆ ತೆರಳಿ ಶಾಲೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಸರ್ಕಾರ ಶಾಲೆ ಆರಂಭಕ್ಕೆ ಅನುಮತಿ ನೀಡಿದ್ರೆ, ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದರು.

ABOUT THE AUTHOR

...view details