ಕರ್ನಾಟಕ

karnataka

ETV Bharat / state

ಕೊರೊನಾ ಆತಂಕ : ವಿಜಯಪುರದ ಭೂತನಾಳ ತಾಂಡಾಕ್ಕೆ ದಿಗ್ಬಂಧನ - road blocke

ಕೊರೊನಾ ಭೀತಿ ಹಿನ್ನೆಲೆ ಭೂತನಾಳ ತಾಂಡಾದ ಎರಡು ಬದಿಯ ರಸ್ತೆಗಳಿಗೆ ಮುಳ್ಳಿನ‌ ಗಿಡಗಳನ್ನಿಟ್ಟು ದಿಗ್ಬಂಧನ ಮಾಡಲಾಗಿದೆ.

no-entry-to-bhootanala-village-of-vijayapura
ಭೂತನಾಳ ತಾಂಡಾಕ್ಕೆ ದಿಗ್ಬಂಧನ

By

Published : Mar 28, 2020, 11:46 AM IST

ವಿಜಯಪುರ:ಕೊರೊನಾ ಭೀತಿ ಹೆಚ್ಚಾದ ಹಿನ್ನಲೆ ವಿಜಯಪುರ ತಾಲೂಕಿನ ಭೂತನಾಳ ತಾಂಡದ ಗ್ರಾಮಸ್ಥರು ತಾಂಡಾವನ್ನು ಸ್ವಯಂ ದಿಗ್ಬಂಧನಕ್ಕೆ ಒಳಪಡಿಸಿದ್ದಾರೆ.

ತಾಂಡಾಕ್ಕೆ ದಿಗ್ಬಂಧನ ಹಾಕಿರುವ ಗ್ರಾಮಸ್ಥರು

ಕೊರೊನಾ ತಡೆಗಟ್ಟಲು ನೀಡಿರುವ ಪ್ರಧಾನಿ ಮೋದಿ ಕರೆಗೆ ಸ್ಪಂದಿಸಿರುವ ತಾಂಡಾದ ಜನರು ಸ್ವಯಂ ದಿಗ್ಬಂಧನ ಮಾಡಿಕೊಂಡಿದ್ದಾರೆ. ಸುಮಾರು 4 ಸಾವಿರ ಜನಸಂಖ್ಯೆ ಹೊಂದಿರುವ ಭೂತನಾಳ ತಾಂಡಾದ ಎರಡು ಬದಿಯ ರಸ್ತೆಗಳಿಗೆ ಮುಳ್ಳಿನ‌ ಗಿಡಗಳನ್ನಿಟ್ಟು ರಸ್ತೆ ಬಂದ್​ ಮಾಡಿದ್ದಾರೆ.

ದಿನ‌ ಬಳಕೆ ವಸ್ತುಗಳು ತಾಂಡಾದಲ್ಲೇ ಸಿಗುತ್ತವೆ. ಯಾರೂ ಹೊರಗಿನಿಂದ ಬರುವುದು ಬೇಡ ಎಂದು ದಿಗ್ಬಂಧನ ಮಾಡಿದ್ದಾರೆ. ಭೂತನಾಳ ತಾಂಡಾಕ್ಕೆ ಬರುವ, ಹೋಗುವ ರಸ್ತೆಗೆ ಮುಳ್ಳುಗಂಟಿ ಹಚ್ಚಿದ್ದಲ್ಲದೇ ಯುವಕರು ಸರದಿಯಂತೆ ಅದನ್ನು ಕಾಯುವ ಕೆಲಸವನ್ನು ಸಹ ಮಾಡುತ್ತಿದ್ದಾರೆ.

ದಿಗ್ಬಂಧನ ಮಾಡುವ ಮೊದಲು ತಾಂಡಾದ ಕಿರಾಣಿ ಅಂಗಡಿಯಲ್ಲಿ ದಿನನಿತ್ಯದ ಬಳಕೆ ವಸ್ತು ಸಂಗ್ರಹಿಸಿಟ್ಟಿದ್ದಾರೆ.

ABOUT THE AUTHOR

...view details