ವಿಜಯಪುರ :ನವ ವಿವಾಹಿತೆಯ ಶವ ನೇಣು ಬೀಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಕೊಂಡಗುಳಿ ಗ್ರಾಮದಲ್ಲಿ ನಡೆದಿದೆ. ಅರುಣಾ ಶರಣು ಕೆಂಭಾವಿ (22) ಎಂಬುವರು ಮೃತ ಗೃಹಿಣಿ.
ಆಷಾಢ ಬಳಿಕ 2 ದಿನಗಳ ಹಿಂದಷ್ಟೇ ಗಂಡನ ಮನೆಗೆ ಮಹಿಳೆ ಆಗಮಿಸಿದ್ದಳು. ಅರುಣಾ ಪತಿ ಶರಣು ಕೆಂಭಾವಿ ಸಹೋದರಿ ಶೈಲಾ ಎಂಬುವರ ವಿರುದ್ಧ ಮೃತಳ ಕುಟುಂಬಸ್ಥರು ಕೊಲೆ ಆರೋಪ ಮಾಡಿದ್ದಾರೆ.
ಘಟನೆ ವಿವರ
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮುದ್ನೂರು ಗ್ರಾಮದ ಅರುಣಾ ಎರಡು ತಿಂಗಳ ಹಿಂದಷ್ಟೇ ಶರಣು ಜೊತೆ ವಿವಾಹವಾಗಿದ್ದಳು. ತಾಯಿ ಇಲ್ಲ ಎನ್ನುವ ಕಾರಣಕ್ಕೆ ಕುಟುಂಬಸ್ಥರು ಅದ್ದೂರಿಯಾಗಿ ಮದುವೆ ಮಾಡಿದ್ದರು.
ಆದ್ರೆ, ಮದುವೆಯಾಗಿ ಸಹೋದರನ ಮನೆಯಲ್ಲಿಯೇ ಇರುವ ಶೈಲಾ ಅರುಣಾಳಿಗೆ ಕಿರುಕುಳ ನೀಡುತ್ತಿದ್ದಳಂತೆ. ಇದರಿಂದ ನೊಂದ ನವವಿವಾಹಿತೆ ನೇಣಿಗೆ ಶರಣಾಗಿದ್ದಾಳೆ ಎಂದು ಹೇಳಲಾಗಿದೆ. ಪ್ರಕರಣ ದೇವರಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.